ಕೊಚ್ಚಿ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.
ಅವರು ಮಲಯಾಳ ಮನೋರಮಾ ಸಮೂಹ ಶುಕ್ರವಾರ ಆಯೋಜಿಸಿದ್ದ ಮನೋರಮಾ ನ್ಯೂಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸುದರ್ಶನ್ ರೆಡ್ಡಿ ಅವರು ಎಡಪಂಥೀಯ ಉಗ್ರವಾದ ಮತ್ತು ನಕ್ಸಲಿಸಂ ಬೆಂಬಲಿಸುವ ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ ದೇಶದಲ್ಲಿ 2020ಕ್ಕೂ ಮೊದಲೇ ಎಡಪಂಥಿಯ ಚಳುವಳಿ ಅಂತ್ಯವಾಗುತ್ತಿತ್ತು ಎಂದರು.
ಸುಪ್ರೀಂಕೋರ್ಟ್‌ನಂತಹ ವೇದಿಕೆಯನ್ನು ಬಳಸಿಕೊಂಡು ಎಡಪಂಥೀಯ ಉಗ್ರವಾದ ಮತ್ತು ನಕ್ಸಲ್‌ವಾದವನ್ನು ಬೆಂಬಲಿಸಿದ ಸುದರ್ಶನ್ ರೆಡ್ಡಿಯನ್ನು ಕಾಂಗ್ರೆಸ್ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದರೆ ಕೇರಳ ನಕ್ಸಲಿಸಂನ ಪರಿಣಾಮ ಅನುಭವಿಸಿದೆ. ಹೀಗಾಗಿ ಕೇರಳದಲ್ಲಿ ಪಕ್ಷದ ಗೆಲುವಿನ ಸಾಧ್ಯತೆ ಮತ್ತಷ್ಟು ಕಡಿಮೆಯಾಗಿದೆ ಎಂದು ಅಮಿತ್ ಶಾ ಹೇಳಿದರು.
ನಕ್ಸಲ್ ವಾದಕ್ಕೆ ಸಹಾಯ ಮಾಡಿದ ಸುದರ್ಶನ್ ರೆಡ್ಡಿ ಅವರು ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ, 2020 ರ ವೇಳೆಗೆ ನಕ್ಸಲ್ ಭಯೋತ್ಪಾದನೆ ಕೊನೆಗೊಳ್ಳುತ್ತಿತ್ತು. ಅವರು ಸಾಲ್ವಾ ಜುಡುಮ್ ತೀರ್ಪು ನೀಡಿದ ಸಿದ್ಧಾಂತದಿಂದ ಪ್ರೇರಿತರಾದ ವ್ಯಕ್ತಿ ಎಂದು ಕಿಡಿಕಾರಿದರು.