ಬೆಂಗಳೂರು: ಅಕ್ಷಯ ತೃತೀಯ ಮುಗಿದ ಬೆನ್ನಲ್ಲೇ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದು ಇತರೆ ಚಿನ್ನದ ದರ ಕೊಂಚವೇ ಇಳಿಕೆಯಾಗಿದೆ. ಇಂದು ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಅಕ್ಷಯ ತೃತೀಯ ಮುಗಿದ ಬೆನ್ನಲ್ಲೇ ಜನ ಚಿನ್ನ ಖರೀದಿಸುವ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಯೇ ಇದೀಗ ಚಿನ್ನದ ದರ ಕೊಂಚ ಇಳಿಕೆಯತ್ತ ಸಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇಂದೂ ಕೂಡಾ ಪರಿಶುದ್ಧ ಚಿನ್ನದ ಬೆಲೆ 97,605 ರೂ.ಗಳಷ್ಟೇ ಇದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚವೇ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 1 ರೂ. ಇಳಿಕೆಯಾಗಿದ್ದು 8,774 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 1 ರೂ. ಇಳಿಕೆಯಾಗಿದ್ದು 9,572 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 1 ಇಳಿಕೆಯಾಗಿದ್ದು 7,179 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರವೂ ನಿನ್ನೆಯಿಂದ ಇಳಿಕೆಯತ್ತ ಸಾಗಿದೆ. ಇಂದೂ ಕೂಡಾ ಬೆಳ್ಳಿ ದರ ಮತ್ತೆ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ 100 ರೂ. ನಷ್ಟು ಇಳಿಕೆಯಾಗಿದ್ದು ಇಂದು 97,900 ರೂ.ಗಳಾಗಿತ್ತು.