ಬೆಂಗಳೂರು: ಲಕ್ಷದ ಗಡಿ ದಾಟಿದ್ದ ಚಿನ್ನದ ದರ ನಿನ್ನೆ ಕೊಂಚ ಏರಿಕೆಯಾದಾಗ ಗ್ರಾಹಕರಲ್ಲಿ ಆತಂಕ ಮೂಡಿತ್ತು. ಇಂದು ಮತ್ತೆ ಸ್ವಲ್ಪ ಇಳಿಕೆಯಾಗಿರುವುದು ಸಮಾಧಾನ ತಂದಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಮೊನ್ನೆಯಂತೂ ಪರಿಶುದ್ಧ ಚಿನ್ನದ ದರ 1,01,890 ರೂ.ಗಳಷ್ಟಾಗಿತ್ತು. ಇದು ಹಿಂದೆಂದೂ ಕಾಣದ ಏರಿಕೆಯಾಗಿತ್ತು. ಇದರ ನಡುವೆ ಮೊನ್ನೆ ಕೊಂಚ ಇಳಿಕೆಯಾಗಿದ್ದು ಸಮಾಧಾನ ಮೂಡಿಸಿತ್ತು. ಆದರೆ ನಿನ್ನೆ ಮತ್ತೆ ಸ್ವಲ್ಪವೇ ಏರಿಕೆಯಾಗಿತ್ತು. ಆದರೆ ಇಂದೀಗ ಮತ್ತೊಮಮೆ ಸ್ವಲ್ಪವೇ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ 98,595 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪವೇ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 3 ರೂ.ನ ಷ್ಟು ಇಳಿಕೆಯಾಗಿದ್ದು 9,002 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 3 ರೂ. ನಷ್ಟು ಇಳಿಕೆಯಾಗಿದ್ದು 9,821 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 2 ರೂ. ಗಳಷ್ಟು ಇಳಿಕೆಯಾಗಿದ್ದು 7,366 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು. ಆದರೆ ಈಗ ಬೆಳ್ಳಿ ದರವೂ ನಿನ್ನೆಯಷ್ಟೇ ಇದೆ. ನಿನ್ನೆ ಕೆ.ಜಿ. ಬೆಳ್ಳಿ ಬೆಲೆ ಇಂದು 1,00,900 ರೂ.ಗಳಾಗಿತ್ತು. ಇಂದೂ ಯಥಾ ಸ್ಥಿತಿಯಲ್ಲಿದೆ.