Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ದರ ಇಂದು ಮತ್ತೆ ಏರಿಕೆ, ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಲಕ್ಷದ ಗಡಿ ದಾಟಿದ್ದ ಚಿನ್ನದ ದರ ನಿನ್ನೆ ಕೊಂಚ ಇಳಿಕೆಯಾದಾಗ ಗ್ರಾಹಕರಲ್ಲಿ ಸಮಾಧಾನ ಮೂಡಿತ್ತು. ಆದರೆ ಇಂದು ಚಿನ್ನದ ದರದಲ್ಲಿ ಮತ್ತೆ ಕೊಂಚ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಮೊನ್ನೆಯಂತೂ ಪರಿಶುದ್ಧ ಚಿನ್ನದ ದರ 1,01,890 ರೂ.ಗಳಷ್ಟಾಗಿತ್ತು. ಇದು ಹಿಂದೆಂದೂ ಕಾಣದ ಏರಿಕೆಯಾಗಿತ್ತು. ಇದರ ನಡುವೆ ನಿನ್ನೆ ಕೊಂಚ ಇಳಿಕೆಯಾಗಿದ್ದು ಸಮಾಧಾನ ಮೂಡಿಸಿತ್ತು. ಆದರೆ ಇಂದು ಮತ್ತೆ ಸ್ವಲ್ಪವೇ ಏರಿಕೆಯಾಗಿದೆ. ಹಾಗಿದ್ದರೂ ಲಕ್ಷದ ಗಡಿಯಲ್ಲೇ ಬೆಲೆಯಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ 99,545 ರೂ.ಗಳಾಗಿದೆ. 

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 9,005 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 9,824 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 7,368 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು.  ಆದರೆ ಈಗ ಬೆಳ್ಳಿ ದರವೂ ನಿನ್ನೆಯಷ್ಟೇ ಇದೆ. ನಿನ್ನೆ ಕೆ.ಜಿ. ಬೆಳ್ಳಿ ಬೆಲೆ ಇಂದು 1,00,900 ರೂ.ಗಳಾಗಿತ್ತು. ಇಂದೂ ಯಥಾ ಸ್ಥಿತಿಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Pehalgam: ಪಹಲ್ಗಾಮ್ ನಲ್ಲಿ ರಕ್ತಪಾತ ಮಾಡಿದ ಉಗ್ರರು ಈಗ ಎಲ್ಲಿದ್ದಾರೆ ಎಂಬುದು ಪತ್ತೆ