Select Your Language

Notifications

webdunia
webdunia
webdunia
webdunia

Gold Price today: ಲಕ್ಷದ ಗಡಿ ದಾಟಿದ್ದ ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಚಿನ್ನದ ದರ ನಿನ್ನೆ ಲಕ್ಷದ ಗಡಿ ದಾಟಿ ದಾಖಲೆ ಬರೆದಿತ್ತು. ಇದೀಗ ಜನ ಚಿನ್ನದ ಸಹವಾಸವೇ ಬೇಡ ಎನ್ನುವ ಪರಿಸ್ಥಿತಿಯಾಗಿತ್ತು. ಆದರೆ ಇಂದು ಕೊಂಚ ಇಳಿಕೆಯಾಗಿದೆ. ಹಾಗಂತ ಸಮಾಧಾನ ಪಡುವಂತೆಯೂ ಇಲ್ಲ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ನಿನ್ನೆಯಂತೂ ಪರಿಶುದ್ಧ ಚಿನ್ನದ ದರ 1,01,890 ರೂ.ಗಳಷ್ಟಾಗಿತ್ತು. ಇದು ಹಿಂದೆಂದೂ ಕಾಣದ ಏರಿಕೆಯಾಗಿತ್ತು. ಹೀಗಾದರೆ ಚಿನ್ನ ಖರೀದಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಗೆ ಜನ ತಲುಪಿದ್ದಾರೆ. ಈ ನಡುವೆ ಇಂದು ಕೊಂಚ ಇಳಿಕೆಯಾಗಿದ್ದು ಸಮಾಧಾನ ಮೂಡಿದೆ. ಆದರೆ ಹೆಚ್ಚೇನೂ ಇಳಿಕೆಯಾಗಿಲ್ಲ. ಇಂದು ಪರಿಶುದ್ಧ ಚಿನ್ನದ ಬೆಲೆ 99,265 ರೂ.ಗಳಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಣ್ಣಮಟ್ಟಿಗೆ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 10 ರೂ.ಗಳಷ್ಟು ಇಳಿಕೆಯಾಗಿದ್ದು 9,005 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 11 ರೂ. ಹೆಚ್ಚಾಗಿದ್ದು 9,824 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 8 ರೂ. ಏರಿಕೆಯಾಗಿದ್ದು 7,368 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು.  ನಿನ್ನೆ ಮತ್ತೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಆದರೆ ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 100 ರೂ.ಗಳಷ್ಟು ಇಳಿಕೆಯಾಗಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಂದು 1,00,900 ರೂ.ಗಳಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕಟ್ಟುನಿಟ್ಟಿನ ಕ್ರಮಕ್ಕೆ ಬೆದರಿದ ಪಾಕಿಸ್ತಾನ: ಅರ್ಜೆಂಟ್ ಮೀಟಿಂಗ್