Select Your Language

Notifications

webdunia
webdunia
webdunia
webdunia

Gold price today: ಅಕ್ಷಯ ತೃತೀಯಕ್ಕೆ ಮೊದಲು ಚಿನ್ನದ ದರ ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಚಿನ್ನದಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಇನ್ನೇನು ಅಕ್ಷಯ ತೃತೀಯ ಬರುತ್ತಿದ್ದು ಖರೀದಿ ಮಾಡುವುದೇ ತಲೆನೋವಾಗಿದೆ. ಈ ನಡುವೆ ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಚಿನ್ನದ ಬೆಲೆ ಕಳೆದ ವಾರದ ಆರಂಭದಲ್ಲೇ ಲಕ್ಷ ತಲುಪಿ ಗ್ರಾಹಕರಿಗೆ ಶಾಕ್ ನೀಡಿತ್ತು. ಇದು ಹಿಂದೆಂದೂ ಕಾಣದ ಏರಿಕೆಯಾಗಿತ್ತು. ಇದರ ನಡುವೆ ಮತ್ತೆ ಏರಿಕೆ, ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ 99,265 ರೂ.ಗಳಷ್ಟೇ ಇದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 62 ರೂ. ಇಳಿಕೆಯಾಗಿದ್ದು 8,940 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 68 ರೂ. ಇಳಿಕೆಯಾಗಿದ್ದು 9,753 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 51 ಇಳಿಕೆಯಾಗಿದ್ದು 7,315 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು.  ಇಂದೂ ಕೂಡಾ ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ 100 ರೂ. ಇಳಿಕೆಯಾಗಿದ್ದು ಇಂದು 1,01,800 ರೂ.ಗಳಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಿಂದ ಡ್ರೈ ಫ್ರೂಟ್ಸ್ ಬಂದ್: ಭಾರತದಲ್ಲಿ ಡ್ರೈ ಫ್ರೂಟ್ಸ್ ರೇಟ್ ಜಾಸ್ತಿಯಾಗಲಿದೆ