ಬೆಂಗಳೂರು: ಅಕ್ಷಯ ತೃತೀಯ ದಿನಕ್ಕೆ ಚಿನ್ನ ಖರೀದಿ ಮಾಡಬೇಕೆಂದುಕೊಂಡವರಿಗೆ ಈಗ ಚಿನ್ನದ ಬೆಲೆ ಚಿಂತೆಗೆ ಕಾರಣವಾಗಿದೆ. ಹಾಗಿದ್ದರೂ ಇಂದು ಪರಿಶುದ್ಧ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಚಿನ್ನದ ಬೆಲೆ ಕಳೆದ ವಾರದ ಆರಂಭದಲ್ಲೇ ಲಕ್ಷ ತಲುಪಿ ಗ್ರಾಹಕರಿಗೆ ಶಾಕ್ ನೀಡಿತ್ತು. ಇದು ಹಿಂದೆಂದೂ ಕಾಣದ ಏರಿಕೆಯಾಗಿತ್ತು. ಇದರ ನಡುವೆ ಮತ್ತೆ ಏರಿಕೆ, ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ.. ಇಂದು ಪರಿಶುದ್ಧ ಚಿನ್ನದ ಬೆಲೆ 98,010 ರೂ.ಗಳಷ್ಟಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 40 ರೂ. ಏರಿಕೆಯಾಗಿದ್ದು 8,980 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 44 ರೂ. ಏರಿಕೆಯಾಗಿದ್ದು 9,797 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 33 ಏರಿಕೆಯಾಗಿದ್ದು 7,348 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರವೂ ನಿನ್ನೆಯಿಂದ ಇಳಿಕೆಯತ್ತ ಸಾಗಿದೆ. ಇಂದೂ ಕೂಡಾ ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು ಇಂದು 1,00,500 ರೂ.ಗಳಾಗಿತ್ತು.