Select Your Language

Notifications

webdunia
webdunia
webdunia
webdunia

ಪೆಟ್ರೋಲ್, ಡಿಸೇಲ್ ವಾಹನ ಬಳಕೆ ಕಡಿವಾಣಕ್ಕೆ ಹಾಕಲು ಕೇಂದ್ರ ಸರಕಾರದಿಂದ ಹೊಸ ನಿಯಮ ಘೋಷಣೆ

ನವದೆಹಲಿ
ನವದೆಹಲಿ , ಬುಧವಾರ, 24 ಅಕ್ಟೋಬರ್ 2018 (13:04 IST)
ನವದೆಹಲಿ : ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ವಾಹನ ಉಪಯೋಗಿಸುವವರಿಗೆ ಕೇಂದ್ರ ಸರಕಾರ ಸಿಹಿಸುದ್ದಿ ನೀಡಿದೆ.


ಈ ಹಿಂದೆ ಎಲೆಕ್ಟ್ರಿಕ್ ವಾಹನ, ಶೇ.100 ರಷ್ಟು ಎಥೆನಾಲ್ ಹಾಗೂ ಮೆಥೆನಾಲ್ ಬಳಸುವ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸಲು ರಾಜ್ಯ ಸರಕಾರಗಳಿಂದ ಪರವಾನಗಿ ಅಗತ್ಯವಿತ್ತು. ಆದರೆ ಇದೀಗ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಹಾಗೂ ಪೆಟ್ರೋಲ್, ಡಿಸೇಲ್ ವಾಹನ ಬಳಕೆ ಕಡಿವಾಣ ಹಾಕಲು ಈ ನಿಯಮವನ್ನು ತೆಗೆಯಲಾಗುವುದು ಎಂದು ಕೇಂದ್ರ ಸಾರಿಗೆ ಇಲಾಖೆ ಘೋಷಿಸಿದೆ‌.


ಹಾಗೇ ಈ ನೂತನ ನಿಯಮದಿಂದ ಆರ್.ಟಿ.ಒ. ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವುದರೊಂದಿಗೆ, ಪರಿಸರ ಸ್ನೇಹಿ ವಾಹನಗಳ ‌ಬಳಕೆ ಹೆಚ್ಚಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು- ಇಂಧನ ಇಲಾಖೆಗೆ ಸೂಚನೆ ನೀಡಿದ ಸಿಎಂ