Select Your Language

Notifications

webdunia
webdunia
webdunia
webdunia

ವಾಟ್ಸ್​​ ಆ್ಯಪ್ ​ನ ವಾಯಿಸ್​ ಕರೆಯಲ್ಲಿ ದೋಷ ಕಂಡುಹಿಡಿದ ಸಿವಿಲ್​​ ಇಂಜಿನಿಯರ್

ವಾಟ್ಸ್​​ ಆ್ಯಪ್ ​ನ ವಾಯಿಸ್​ ಕರೆಯಲ್ಲಿ ದೋಷ ಕಂಡುಹಿಡಿದ ಸಿವಿಲ್​​ ಇಂಜಿನಿಯರ್
ನವದೆಹಲಿ , ಗುರುವಾರ, 13 ಜೂನ್ 2019 (06:24 IST)
ನವದೆಹಲಿ : ಸೋಶಿಯಲ್ ಮೀಡಿಯಾಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಆಗಾಗ ಕಂಡುಬರುತ್ತದೆ. ಅದೇರೀತಿ ಇದೀಗ ಸಿವಿಲ್​​ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ವಾಟ್ಸ್​​ ಆ್ಯಪ್ ​ನಲ್ಲಿ ಕಂಡು ಬಂದ ದೋಷವೊಂದನ್ನು ಕಂಡು ಹಿಡಿದು ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ನ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.



ಹೌದು. ಸಿವಿಲ್​​ ಇಂಜಿನಿಯರ್​ ಮಾಡುತ್ತಿರುವ ಭಾರತೀಯ ಝೋನೆಲ್​​  (21ವರ್ಷ) ವಾಟ್ಸ್​ ಆ್ಯಪ್ ​ನಲ್ಲಿರುವ ವಾಯಿಸ್​ ಕರೆಯಲ್ಲಿ ಕಂಡು ಬಂದ ದೋಷವನ್ನು ಪತ್ತೆ ಹಚ್ಚಿದ್ದಾರೆ. ಬಳಕೆದಾರರು ವಾಯಿಸ್​ ಕರೆಯಲ್ಲಿ ಮಾತನಾಡುತ್ತಿದ್ದಾಗ ಆ ಕರೆಯನ್ನು ಬಳಕೆದಾರನ ಗಮನಕ್ಕೆ ಬಾರದಂತೆ ವಿಡಿಯೋ ಕಾಲ್ ​​​ಗೆ ಬದಲಾಯಿಸಬಹುದಂತೆ. ಹೀಗಾಗಿ ಕರೆ ಸ್ವೀಕರಿಸಿದ ಬಳಕೆದಾರ ಏನು ಮಾಡುತ್ತಿದ್ದಾನೆ ಎಂದು ವೀಕ್ಷಿಸಬಹುದಂತೆ.

 

ಈ ವಿಚಾರವನ್ನು ಝೋನೆಲ್  ಫೇಸ್ಬುಕ್ ​ ನಡೆಸಿದ ‘ಬಗ್​ ಬೌಂಟಿ‘ ಕಾರ್ಯಕ್ರಮದಲ್ಲಿ ತಿಳಿಸಿದ್ದಾನೆ. ಈ ದೋಷ ಕಂಡುಹಿಡಿದ ಝೋನೆಲ್ ಗೆ ಫೇಸ್ಬುಕ್​ 3.4 ಲಕ್ಷ ಬಹುವಾನ ನೀಡಿದೆ. ಜೊತೆಗೆ ಫೇಸ್ಬುಕ್​ ತನ್ನ ‘ಹಾಲ್​​​​ ಆಫ್​ ಫೇಮ್​​ ಲೀಸ್ಟ್‘​ನಲ್ಲಿ ಝೆನೆಲ್​ ಹೆಸರನ್ನು ಸೇರಿಸಿದೆ. ಹಾಗೇ ಸಮಸ್ಯೆಯನ್ನು 15 ದಿನಗಳ ಒಳಗೆ ಸರಿಪಡಿಸುವುದಾಗಿ ತಿಳಿಸಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಚ್ಚತಾ ಆಂದೋಲನದಲ್ಲಿ ಈ ಬಾಲಕಿ ಸಂಗ್ರಹಿಸಿದ ತ್ಯಾಜ್ಯ ಎಷ್ಟೆಂದು ಕೇಳಿದ್ರೆ ಶಾಕ್ ಆಗ್ತೀರಾ?