Select Your Language

Notifications

webdunia
webdunia
webdunia
webdunia

ವೀಸಾ ನೀಡಿಕೆಯಲ್ಲಿ ಹೊಸ ನಿಯಮ ಜಾರಿಗೆ ತಂದ ಅಮೇರಿಕಾ

ವೀಸಾ ನೀಡಿಕೆಯಲ್ಲಿ ಹೊಸ ನಿಯಮ ಜಾರಿಗೆ ತಂದ ಅಮೇರಿಕಾ
ವಾಷಿಂಗ್ಟನ್ , ಮಂಗಳವಾರ, 4 ಜೂನ್ 2019 (07:38 IST)
ವಾಷಿಂಗ್ಟನ್ : ಭಯೋತ್ಪಾದಕರು ಮತ್ತು ಉಗ್ರರು ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸುವ ಸಲುವಾಗಿ ಇದೀಗ ಅಮೇರಿಕಾ ವೀಸಾ ನೀಡಿಕೆಯಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ.




ಅದರಂತೆ ಅಮೆರಿಕಗೆ ಭೇಟಿ ನೀಡಲು ವೀಸಾಗಾಗಿ ಅರ್ಜಿ ಸಲ್ಲಿಸುವವರು ಫೇಸ್ಬುಕ್​, ಇನ್ ​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ ಖಾತೆ ಬಳಕೆಯ ಬಗ್ಗೆ ಮಾಹಿತಿ ನೀಡಬೇಕು. ಅಮೆರಿಕಕ್ಕೆ ತಾತ್ಕಾಲಿಕ ಭೇಟಿ ನೀಡುವವರು ಸೇರಿದಂತೆ ಎಲ್ಲರಿಗೂ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ.


5 ವರ್ಷಗಳ ಕಾಲ ಸಾಮಾಜಿಕ ಜಾಲತಾಣದ ಬಳಕೆ ಬಗ್ಗೆ ಅಮೆರಿಕಾಕ್ಕೆ ಸಂಪೂರ್ಣ ಮಾಹಿತಿ ನೀಡಬೇಕಿದೆ. ಈ ಹೊಸ ನೀತಿಯಿಂದ ಬಳಕೆದಾರನ ಖಾತೆಯ ಮಾಹಿತಿ ಪಡೆದು, ಚಟುವಟಿಕೆಗಳನ್ನು ಪರೀಶಿಲಿಸಲಾಗುತ್ತದೆ. ಒಂದು ವೇಳೆ ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮ ಬಳಕೆ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಲ್ಲಿಯ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಆದಾಯ ತೆರಿಗೆ ಪಾವತಿ ಮಾಡಿದರೆ ಪ್ರಧಾನಿ ಮೋದಿ ಜೊತೆಗೆ ಟೀ ಕುಡಿಯುವ ಅವಕಾಶ