Publish Date: Thu, 23 Jan 2020 (11:41 IST)
Updated Date: Thu, 23 Jan 2020 (11:45 IST)
ಬೆಂಗಳೂರು: ಜಿಯೋ ತನ್ನ ಗ್ರಾಹಕರಿಗೆ ಒಂದು ಖುಷಿಯ ಸುದ್ದಿಯನ್ನು ನೀಡಿದೆ. ರಿಲಾಯನ್ಸ್ ಜಿಯೋ ರೂ.199ರ ಯೋಜನೆಯೊಂದನ್ನು ತನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ.
ಈ 199ರೂನ ಪ್ಲ್ಯಾನ್ ನಲ್ಲಿ ಗ್ರಾಹಕರು ದಿನ 1.5 ಜಿಬಿ ಡೇಟಾ ಜತೆಗೆ ಜಿಯೋ-ಟು-ಜಿಯೋ ಅನ್ ಲಿಮಿಟೆಡ್ ಕರೆಯ ಸೌಲಭ್ಯವನ್ನು ಪಡೆಯಲಿದ್ದಾರೆ.
ಹಾಗೇ 125 ರೂ ರಿಚಾರ್ಚ್ ಪ್ಲ್ಯಾನ್ ನಲ್ಲಿ ಜಿಯೋ –ಟು ಜಿಯೋ ಅನ್ ಲಿಮಿಟೆಡ್ ಕರೆಯನ್ನು ಮಾಡಬಹುದು.ಹಾಗೇ ಬೇರೆ ನೆಟ್ ವರ್ಕ್ ಕರೆಗಳಿಗೆ 500 ಐಯುಸಿ ನಿಮಿಷಗಳನ್ನು ಕೂಡ ಇದರಲ್ಲಿ ಉಚಿತವಾಗಿ ನೀಡಲಾಗುತ್ತದೆಯಂತೆ. ಜತೆಗೆ 14 ಜಿಬಿ ಇಂಟರ್ ನೆಟ್ ಡೇಟಾವನ್ನು ಬಳಸಬಹುದಾಗಿದೆ.