Publish Date: Tue, 21 Jan 2020 (07:51 IST)
Updated Date: Tue, 21 Jan 2020 (07:53 IST)
ಬೆಂಗಳೂರು: ಭಾರ್ತಿ ಏರ್ ಟೆಲ್ ಕಂಪೆನಿ ತನ್ನ ಗ್ರಾಹಕರಿಗೆ ರಿಚಾರ್ಜ್ ಪ್ಯಾಕ್ ನೊಂದಿಗೆ ಭಾರ್ತಿ ಅಕ್ಸಾ ಲೈಫ್ ಇನ್ಸ್ ಶ್ಯುರೆನ್ಸ್ ವಿಮಾ ಪಾಲಿಸಿಯನ್ನು ನೀಡುತ್ತಿದೆ.
179 ರಿಚಾರ್ಜ್ ಫ್ಲ್ಯಾನ್ ಮಾಡಿದರೆ ಅನಿಯಮಿತ ಕರೆ 2ಜಿಬಿ ಡೇಟಾ, 300 ಎಸ್ ಎಂಎಸ್ ಇದರ ಜತೆಗೆ ಭಾರ್ತಿ ಅಕ್ಸಾ ಲೈಫ್ ಇನ್ಸುರೆನ್ಸ್ 2 ಲಕ್ಷ ರೂ ವಿಮಾ ಸೌಲಭ್ಯ ದೊರಕಲಿದೆ ಎಂದು ಕಂಪೆನಿ ತಿಳಿಸಿದೆ.
ಇನ್ನು ವಿಮಾ ಸೌಲಭ್ಯವು 18 ರಿಂದ 54 ವರ್ಷದೊಳಗಿನವರಿಗೆ ಲಭ್ಯವಿದೆಯಂತೆ. ಈ ವಿಮೆ ಹೊಂದಲು ಯಾವುದೇ ದಾಖಲೆ ಪತ್ರಗಳ ಅಗತ್ಯವಿಲ್ಲ ಎಂದು ಕಂಪೆನಿ ತಿಳಿಸಿದೆ.