Select Your Language

Notifications

webdunia
webdunia
webdunia
webdunia

ಈ ವಿಷಯಕ್ಕಾಗಿ ಗ್ರಾಹಕರನ್ನೇ ಥಳಿಸಿದ ಹೊಟೇಲ್ ಸಿಬ್ಬಂದಿ

ಗ್ರಾಹಕರು
ಗ್ರಾಹಕರನ್ನೇ ಹೊಟೇಲ್ ಸಿಬ್ಬಂದಿ ಮನಬಂದಂತೆ ಥಳಿಸಿರೋ ಘಟನೆ ನಡೆದಿದೆ.

ಊಟ ಮಾಡಿದ ಬಿಲ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರ ಮೇಲೆ ಹೊಟೇಲ್ ಸಿಬ್ಬಂದಿ ಮನಬಂದಂತೆ ಥಳಿಸಿರುವ ಘಟನೆ ಹುಬ್ಬಳ್ಳಿಯ ಪಿಬಿ ರಸ್ತೆಯ ನಿಯಾಜ್ ಹೊಟೇಲಿನಲ್ಲಿ ನಡೆದಿದೆ.

ಗಬ್ಬೂರು ನಿವಾಸಿಗಳಾದ  ಪ್ರಕಾಶ ಬಿದರಕುಂದಿ ಹಾಗೂ ಮುತ್ತಪ್ಪ ಬಿದರಕುಂದಿ ಎಂಬುವವರು ಊಟ‌ ಮಾಡಿದ ‌ಬಿಲ್ ಕೊಡಲು ಹೋಗಿದ್ದಾರೆ. ಆದರೆ ಬಿಲ್ ನಲ್ಲಿ 60 ರೂಪಾಯಿ ವ್ಯತ್ಯಾಸವಾಗಿದೆ. ಇದಕ್ಕೆ ಗ್ರಾಹಕರು 60 ರೂ. ಹೆಚ್ಚು ಬಿಲ್ ಹಚ್ಚಿದ್ದೀರಿ ಕೋಡೋದಿಲ್ಲ ಎಂದಿದ್ದಾರೆ.

ಹೀಗಾಗಿ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿಕ ಚಕಮಕಿ ನಡೆದು, ಹೊಡೆದಾಟವಾಗಿದೆ. ಹೊಟೇಲ್ ಸಿಬ್ಬಂದಿ ಗ್ರಾಹಕರಿಬ್ಬರ ಮೇಲೆ ನೀರಿನ ಜಗ್ ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆ ಮಾಡಿರೋ ವಿಡಿಯೋವನ್ನು ಗ್ರಾಹಕರು ಚಿತ್ರಿಕರಿಸಿದ್ದಾರೆ. ಈ  ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

‘ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ’