Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಐಪಿಎಲ್ ಗೆ ಕಮ್ ಬ್ಯಾಕ್ ಮಾಡ್ತಾರಾ? ಬಿಸಿಸಿಐ ಹೇಳೋದೇನು?

ಸುರೇಶ್ ರೈನಾ ಐಪಿಎಲ್ ಗೆ ಕಮ್ ಬ್ಯಾಕ್ ಮಾಡ್ತಾರಾ? ಬಿಸಿಸಿಐ ಹೇಳೋದೇನು?
ಮುಂಬೈ , ಭಾನುವಾರ, 6 ಸೆಪ್ಟಂಬರ್ 2020 (11:21 IST)
ಮುಂಬೈ: ವೈಯಕ್ತಿಕ ಕಾರಣ ನೀಡಿ ಕೊನೆ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೈಕೊಟ್ಟ ಸುರೇಶ್ ರೈನಾ ಮುಂದಿನ ದಿನಗಳಲ್ಲಿ ಬೇರೆ ತಂಡದಿಂದಾದರೂ ಐಪಿಎಲ್ ಆಡುತ್ತಾರಾ? ಈ ಪ್ರಶ್ನೆಗೆ ಬಿಸಿಸಿಐ ಕೂಡಾ ಸ್ಪಷ್ಟ ಉತ್ತರ ನೀಡುತ್ತಿಲ್ಲ.


ರೈನಾ ಮುಂದಿನ ದಿನಗಳಲ್ಲಿ ಚೆನ್ನೈ ಇಲ್ಲವೇ ಬೇರೆ ತಂಡದಲ್ಲಿ ಈ ಐಪಿಎಲ್ ಕೂಟದಲ್ಲಿ ಆಡುತ್ತಾರಾ ಎಂಬುದಕ್ಕೆ ಸ್ವತಃ ಬಿಸಿಸಿಐ ಸ್ಪಷ್ಟನೆ ನೀಡಿಲ್ಲ. ರೈನಾ ಹೊರಬರುವುದಕ್ಕೆ ಧೋನಿ ಜತೆಗಿನ ವೈಮನಸ್ಯ ಕಾರಣ ಎಂಬ ಊಹಾಪೋಹಗಳಿವೆ. ಒಂದು ವೇಳೆ ವೈಮನಸ್ಯವೇ ಕಾರಣವಾದರೆ ಬಿಸಿಸಿಐ ಸಿಎಸ್ ಕೆ ತಂಡದ ಆಂತರಿಕ ವಿಷಯದಲ್ಲಿ ತಲೆ ಹಾಕಲ್ಲ ಎಂದಿದೆ. ಒಂದು ವೇಳೆ ನಿಜವಾಗಿಯೂ ವೈಯಕ್ತಿಕ ಕಾರಣವಾಗಿದ್ದರೆ ಮುಂದಿನ ದಿನಗಳಲ್ಲಿ ಐಪಿಎಲ್ ಗೆ ಮರಳುವ ಕುರಿತಂತೆ ಬಿಸಿಸಿಐ ಮಧ್ಯಪ್ರವೇಶ ಮಾಡಬಹುದಾಗಿದೆ. ಹೀಗಾಗಿ ರೈನಾ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ವೇಳಾಪಟ್ಟಿ ಇಂದು ರಿಲೀಸ್