ದುಬೈ: ರಾಯಲ್ ಚಾಲೆಂಜರ್ಸ್ ತಂಡದೊಂದಿಗೆ ನಾಯಕ ವಿರಾಟ್ ಕೊಹ್ಲಿ ದುಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸದೇ ಇದ್ದಿದ್ದು ಭಾರೀ ಟೀಕೆಗೊಳಗಾಗಿತ್ತು.
ಚೆನ್ನೈ ನಾಯಕ ಧೋನಿ ಯಾವುದೇ ಗತ್ತು ಪ್ರದರ್ಶಿಸದೇ ಸಹ ಕ್ರಿಕೆಟಿಗರೊಂದಿಗೆ ಬೆರೆಯುತ್ತಾರೆ. ಆದರೆ ಕೊಹ್ಲಿ ಮಾತ್ರ ಎಲ್ಲಾ ಆಟಗಾರರ ಜತೆ ವಿಮಾನದಲ್ಲಿ ಪ್ರಯಾಣಿಸಲಿಲ್ಲ ಎಂದು ಟೀಕೆ ಮಾಡಲಾಗಿತ್ತು.
ಆದರೆ ಅದಕ್ಕೀಗ ನಿಜ ಕಾರಣ ಗೊತ್ತಾಗಿದೆ. ಅನುಷ್ಕಾ ಗರ್ಭಿಣಿಯಾಗಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಆಕೆಯನ್ನು ಎಚ್ಚರಿಕೆಯಿಂದ ಕರೆದೊಯ್ಯಬೇಕಾಗಿತ್ತು. ಹೀಗಾಗಿ ಕೊಹ್ಲಿ ದುಬೈಗೆ ಪ್ರತ್ಯೇಕ ಖಾಸಗಿ ವಿಮಾನದ ಮೂಲಕ ಅನುಷ್ಕಾ ಜತೆ ಪ್ರಯಾಣಿಸಿದ್ದರು ಎಂಬುದು ಈಗ ಬಹಿರಂಗವಾಗಿದೆ.