Publish Date: Sat, 05 Sep 2020 (09:45 IST)
Updated Date: Sat, 05 Sep 2020 (09:47 IST)
ದುಬೈ: ಸುರೇಶ್ ರೈನಾ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರ್ಭಜನ್ ಸಿಂಗ್ ಕೂಡಾ ಕೊನೆಯ ಕ್ಷಣದಲ್ಲಿ ಆಘಾತ ನೀಡಿದ್ದಾರೆ. ಭಜಿ ಕೂಡಾ ವೈಯಕ್ತಿಕ ಕಾರಣ ನೀಡಿ ಈ ಬಾರಿಯ ಐಪಿಎಲ್ ನಿಂದ ಹೊರಬಂದಿದ್ದಾರೆ.
ರೈನಾ ಹೊರ ಹೋದ ಬಳಿಕ ಭಜಿ ಕೂಡಾ ಹೊರಬರಬಹುದು ಎಂಬ ಸುದ್ದಿಯಿತ್ತು. ಅದೀ ನಿಜವಾಗಿದೆ. ಸಿಎಸ್ ಕೆ ತಂಡಕ್ಕೆ ಹರ್ಭಜನ್ ಈಗಾಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಹರ್ಭಜನ್ ಚೆನ್ನೈನಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲೂ ಪಾಲ್ಗೊಂಡಿರಲಿಲ್ಲ. ಬಳಿಕ ತಂಡದ ಜತೆಗೆ ದುಬೈಗೂ ಪ್ರಯಾಣ ಬೆಳೆಸಿರಲಿಲ್ಲ. ಇದೀಗ ಮೂಲಗಳ ಪ್ರಕಾರ ಅವರೂ ಐಪಿಎಲ್ ನಿಂದ ಹೊರಬರುವ ನಿರ್ಧಾರ ತಿಳಿಸಿದ್ದಾರೆ.