ಚೆನ್ನೈ: ಈ ಬಾರಿಯ ಐಪಿಎಲ್ ನಿಂದ ವೈಯಕ್ತಿಕ ಕಾರಣ ನೀಡಿ ಹೊರಬಂದಿರುವ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಸುರೇಶ್ ರೈನಾ ಕಳೆದುಕೊಳ್ಳಲಿರುವ ಹಣವೆಷ್ಟು ಗೊತ್ತಾ?
ಹರ್ಭಜನ್ ಸಿಂಗ್ ರನ್ನು 2 ಕೋಟಿ ರೂ.ಗೆ ಚೆನ್ನೈ ಖರೀದಿಸಿತ್ತು. ಒಂದೂ ಪಂದ್ಯವಾಡದ ಕಾರಣ ಭಜಿಗೆ ಇಷ್ಟೂ ಹಣ ನಷ್ಟವಾಗಲಿದೆ. ಆದರೆ ಹರ್ಭಜನ್ ಗಿಂತಲೂ ಹೆಚ್ಚು ನಷ್ಟವಾಗಲಿರುವುದು ಸುರೇಶ್ ರೈನಾಗೆ .ರೈನಾರನ್ನು ಚೆನ್ನೈ 11 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ರೈನಾ ಒಂದೂ ಪಂದ್ಯವಾಡದೇ ಹೊರಬಂದಿರುವುದರಿಂದ ಅಷ್ಟೂ ಹಣವನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಹಣಕ್ಕಿಂತಲೂ ತಮಗೆ ಕುಟುಂಬವೇ ಮುಖ್ಯ ಎಂದು ರೈನಾ ಈಗಾಗಲೇ ಹೇಳಿದ್ದಾರೆ.