Select Your Language

Notifications

webdunia
webdunia
webdunia
webdunia

ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕರಾದ ಶ್ರೇಯಸ್ ಐಯರ್

ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕರಾದ ಶ್ರೇಯಸ್ ಐಯರ್
ಮುಂಬೈ , ಬುಧವಾರ, 16 ಫೆಬ್ರವರಿ 2022 (17:23 IST)
ಮುಂಬೈ: ಐಪಿಎಲ್ ಹರಾಜು ಮುಕ್ತಾಯವಾಗಿ ಹೊಸ ತಂಡ ಕಟ್ಟಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಶ್ರೇಯಸ್ ಐಯರ್ ರನ್ನು ನಾಯಕರಾಗಿ ನೇಮಕ ಮಾಡಿದೆ.

ಬರೋಬ್ಬರಿ 12.25 ಕೋಟಿ ರೂ.ಗೆ ಕೆಕೆಆರ್ ಶ್ರೇಯಸ್ ರನ್ನು ಖರೀದಿ ಮಾಡಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ನ ಮಾಜಿ ನಾಯಕ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಬಾರಿ ಇಯಾನ್ ಮಾರ್ಗನ್ ನೇತೃತ್ವದಲ್ಲಿ ಕೆಕೆಆರ್ ಫೈನಲ್ ವರೆಗೆ ತಲುಪಿತ್ತು. ಆದರೆ ಮಾರ್ಗನ್ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಈ ಬಾರಿ ಯಾವುದೇ ತಂಡವೂ ಅವರನ್ನು ಖರೀದಿಸಿರಲಿಲ್ಲ. ಡೆಲ್ಲಿ ನಾಯಕರಾಗಿ ಶ್ರೇಯಸ್ ಐಯರ್ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಅಥಿಯಾ ಮನೆಗೆ ಬಂದ ಹೊಸ ಅತಿಥಿ