Select Your Language

Notifications

webdunia
webdunia
webdunia
webdunia

ಐಪಿಎಲ್ ಹಣದಲ್ಲಿ ಕೊರೋನಾ ಪೀಡಿತ ತಂದೆಗೆ ಚಿಕಿತ್ಸೆಕೊಡಿಸಿದ ಕ್ರಿಕೆಟಿಗ

ಐಪಿಎಲ್ ಹಣದಲ್ಲಿ ಕೊರೋನಾ ಪೀಡಿತ ತಂದೆಗೆ ಚಿಕಿತ್ಸೆಕೊಡಿಸಿದ ಕ್ರಿಕೆಟಿಗ
ಮುಂಬೈ , ಶನಿವಾರ, 8 ಮೇ 2021 (09:23 IST)
ಮುಂಬೈ: ಕೊರೋನಾ ಪೀಡಿತ ತಂದೆಯನ್ನು ನೋಡಿಕೊಳ್ಳುತ್ತಿರುವ ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗ ಚೇತನ್ ಸಕಾರಿಯಾ ಈಗ ಐಪಿಎಲ್ ನಲ್ಲಿ ತನಗೆ ಸಿಕ್ಕ ಹಣದಿಂದ ತಂದೆಯ ಚಿಕಿತ್ಸೆಯ ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರಂತೆ.


ಚೇತನ್ ರನ್ನು ರಾಜಸ್ಥಾನ್ 1.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದೀಗ ಆ ಹಣ ಅವರಿಗೆ ತಂದೆಗೆ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗಿದೆಯಂತೆ.

ಗುಜರಾತ್ ನ ಭಾವ್ನಾನಗರ್ ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಾಜಸ್ಥಾನ್ ಫ್ರಾಂಚೈಸಿ ನನಗೆ ಭಾಗಶಃ ವೇತನ ನೀಡಿತ್ತು. ಆ ಹಣವನ್ನು ತಕ್ಷಣವೇ ನಾನು ಕುಟುಂಬಸ್ಥರಿಗೆ ವರ್ಗಾಯಿಸಿದೆ. ಈ ಹಣದಿಂದಲೇ ಈಗ ತಂದೆಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಅವರು ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ದುಡಿದ ಹಣವನ್ನು ಕೊರೋನಾ ಪರಿಹಾರಕ್ಕೆ ನೀಡಿದ ಲಕ್ಷ್ಮೀ ರತನ್ ಶುಕ್ಲಾ