Select Your Language

Notifications

webdunia
webdunia
webdunia
webdunia

ಐಪಿಎಲ್ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ?!

ಐಪಿಎಲ್ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ?!
ಮುಂಬೈ , ಶುಕ್ರವಾರ, 7 ಮೇ 2021 (10:55 IST)
ಮುಂಬೈ: ಕೊರೋನಾದಿಂದಾಗಿ ಐಪಿಎಲ್ 14 ಅರ್ಧದಲ್ಲೇ ಅಮಾನತುಗೊಂಡಿದೆ. ಒಂದು ವೇಳೆ ಈ ಟೂರ್ನಿ ಮತ್ತೆ ಪೂರ್ಣಗೊಳಿಸದೇ ಹೋದರೆ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ?


ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ. ಐಪಿಎಲ್ ಪೂರ್ಣಗೊಳ್ಳದೇ ಹೋದರೆ ಬಿಸಿಸಿಐಗೆ ಸುಮಾರು 2500 ಕೋಟಿ ರೂ.ಗಳಷ್ಟು ನಷ್ಟವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ.

ಇದುವರೆಗೆ 60 ಪಂದ್ಯಗಳ ಪೈಕಿ 29 ಪಂದ್ಯಗಳು ನಡೆದಿವೆ. ಉಳಿದ ಪಂದ್ಯಗಳನ್ನು ಪೂರ್ಣಗೊಳಿಸದೇ ಹೋದರೆ ಈಗಿನ ಲೆಕ್ಕಾಚಾರದ ಪ್ರಕಾರ 2500 ಕೋಟಿ ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಶತಾಯ ಗತಾಯ ಬಿಸಿಸಿಐ ಐಪಿಎಲ್ 14 ರನ್ನು ಪೂರ್ಣಗೊಳಿಸಲು ಪ್ರಯತ್ನಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವಿರುದ್ಧ ಹೋರಾಡಲು ಹೊಸ ಯೋಜನೆ ಪ್ರಕಟಿಸಿದ ವಿರಾಟ್ ಕೊಹ್ಲಿ ದಂಪತಿ