Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಅರ್ಧದಲ್ಲೇ ಕಿತ್ತೊಗೆಯುತ್ತಾ ಆರ್ ಸಿಬಿ?!

ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಅರ್ಧದಲ್ಲೇ ಕಿತ್ತೊಗೆಯುತ್ತಾ ಆರ್ ಸಿಬಿ?!
ದುಬೈ , ಬುಧವಾರ, 22 ಸೆಪ್ಟಂಬರ್ 2021 (10:40 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಆಡಿದ ರೀತಿ ನೋಡಿ ಕ್ಯಾಪ್ಟನ್ ಕೊಹ್ಲಿಗೆ ಅರ್ಧದಲ್ಲೇ ಅರ್ಧಚಂದ್ರ ಸಿಗಬಹುದು ಎಂಬ ಅನುಮಾನ ಮೂಡಿದೆ.


ಈಗಾಗಲೇ ಈ ಐಪಿಎಲ್ ಕೂಟವೇ ನಾಯಕನಾಗಿ ನನ್ನ ಕೊನೆಯ ಐಪಿಎಲ್ ಎಂದು ಕೊಹ್ಲಿ ಘೋಷಿಸಿದ್ದರು. ಆದರೆ ಅದಕ್ಕೂ ಮೊದಲೇ ಕೊಹ್ಲಿಯನ್ನು ನಾಯಕತ್ವದಿಂದ ಕಿತ್ತೊಗೆದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಕೆಕೆಆರ್ ವಿರುದ್ಧ ಸ್ವತಃ ಕೊಹ್ಲಿಯೇ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದರು. ಅಲ್ಲದೆ, ಅವರ ನಾಯಕತ್ವವೂ ಕಳಪೆಯಾಗಿತ್ತು. ಇನ್ನೊಂದು ಪಂದ್ಯದಲ್ಲಿ ಕೊಹ್ಲಿ ಇದೇ ರೀತಿ ವಿಫಲರಾದರೆ ಅವರನ್ನು ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ವಿರುದ್ಧ ಸಹಆಟಗಾರರಿಂದಲೇ ಬಿಸಿಸಿಐಗೆ ದೂರು?!