Select Your Language

Notifications

webdunia
webdunia
webdunia
webdunia

ಮತ್ತೆ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದ ರಾಠಿಗೆ ಬಿತ್ತು ಭಾರೀ ದಂಡ: ರಿಷಭ್ ಪಂತ್‌ಗೂ ₹12 ಲಕ್ಷ ಫೈನ್‌

Lucknow Supergiants, Captain Rishabh Pant, Indian Premier League

Sampriya

ಲಖನೌ , ಶನಿವಾರ, 5 ಏಪ್ರಿಲ್ 2025 (13:35 IST)
Photo Courtesy X
ಲಖನೌ: ಲಖನೌ ಸೂಪರ್‌ ಜೈಂಟ್ಸ್‌ ತಂಡದ ಬೌಲರ್‌ ದಿಗ್ವೇಶ್ ರಾಠಿ ಅವರು ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಭಾರೀ ದಂಡ ತೆತ್ತಿದ್ದಾರೆ.

ಮುಂಬೈ ತಂಡದ ನಮನ್ ಧೀರ್ ವಿಕೆಟ್‌ ಪಡೆದ ರಾಠಿ ಅವರು ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದ್ದಾರೆ. ಹೀಗಾಗಿ ಸತತ ಎರಡನೇ ಬಾರಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ, ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದ ವೇಳೆಯೂ ಇದೇ ರೀತಿ ಸಂಭ್ರಮಾಚರಿಸಿ ದಂಡಕ್ಕೆ ಗುರಿಯಾಗಿದ್ದರು.

ಐಪಿಎಲ್‌ನ ಲೆವೆಲ್-1 ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ಹಾಕಲಾಗಿದೆ. ಆದರೆ, ರಾಠಿ ಅವರ ಅಮೋಘ ಬೌಲಿಂಗ್‌ ದಾಳಿಯ ನೆರವಿನಿಂದ ಮುಂಬೈ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡವು 12 ರ‌ನ್‌ಗಳಿಂದ ಜಯ ಸಾಧಿಸಿತ್ತು. ರಾಠಿ ಒಂದು ವಿಕೆಟ್‌ ಪಡೆಯುವ ಜೊತೆಗೆ ರನ್‌ ನಿಯಂತ್ರಣ ಮಾಡಿದ್ದರು.

ಇದೇ ವೇಳೆ ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್‌ಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಬಿಸಿಸಿಐ ₹ 12 ಲಕ್ಷ ದಂಡ ವಿಧಿಸಿದೆ.

ಬೌಲಿಂಗ್ ತಂಡವು 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಆದರೆ ಎಲ್‌ಎಸ್‌ಜಿ ನಿಗದಿತ ಸಮಯಕ್ಕಿಂತ ಒಂದು ಓವರ್ ಹಿಂದಿತ್ತು. ಹೀಗಾಗಿ 19 ನೇ ಓವರ್‌ ಬಳಿಕ ಅವರು 30-ಗಜ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಅನ್ನು ಕಡಿಮೆ ಇಡಬೇಕಾಯಿತು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಪರಿಚ್ಚೇದ 2.22ರ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ರಿಷಭ್ ಪಂತ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಹಾರ್ದಿಕ್ ಪಾಂಡ್ಯ ಮೇಲೆ ಸೂರ್ಯಕುಮಾರ್ ಯಾದವ್ ಅಸಮಾಧಾನ (Video)