Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ ಇಂದು ಎರಡು ಹೈವೋಲ್ಟೇಜ್‌ ಪಂದ್ಯಗಳು: ಪಂದ್ಯ ಆರಂಭ, ನೇರಪ್ರಸಾರದ ಮಾಹಿತಿ ಇಲ್ಲಿದೆ

Indian Premier League, Sunrisers Hyderabad, Chennai Super Kings

Sampriya

ವಿಶಾಖಪಟ್ಟಣ , ಭಾನುವಾರ, 30 ಮಾರ್ಚ್ 2025 (10:23 IST)
Photo Courtesy X
ವಿಶಾಖಪಟ್ಟಣ: ಇಂಡಿಯನ್‌ ಪ್ರೀಮಿಯಲ್‌ ಲೀಗ್‌ನಲ್ಲಿ ಇಂದು ಡಬಲ್‌ ಹೆಡ್ಡರ್‌ ಪಂದ್ಯಗಳು ನಡೆಯಲಿವೆ. ವಿಶಾಖಪಟ್ಟಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸ್ಪರ್ಧಿಸಿದರೆ, ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಲಖನೌ ಸೂಪರ್‌ ಜೈಂಟ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಮಧ್ಯಾಹ್ನ 3.30ಕ್ಕೆ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಕನ್ನಡಿಗ ಕೆ.ಎಲ್‌.ರಾಹುಲ್ ಅವರು ಡೆಲ್ಲಿ ತಂಡಕ್ಕೆ ಮರಳುತ್ತಿದ್ದಾರೆ.

ಮೆಗಾ ಹರಾಜಿನಲ್ಲಿ ₹14 ಕೋಟಿ ಮೊತ್ತಕ್ಕೆ ರಾಹುಲ್ ಅವರನ್ನು ಡೆಲ್ಲಿ ತಂಡವು ಖರೀದಿಸಿತ್ತು. ಈ ಹಿಂದಿನ ಋತುವಿನಲ್ಲಿ ಲಖನೌ ತಂಡ ಮುನ್ನಡೆಸಿದ್ದ ಅವರು ಇಲ್ಲಿ ಅಕ್ಷರ್ ಪಟೇಲ್ ನಾಯಕತ್ವದಡಿ ಆಡುತ್ತಿದ್ದಾರೆ. ಮತ್ತೊಂದೆಡೆ ಹೈದರಾಬಾದ್‌ ತಂಡವು ರಾಜಸ್ಥಾನ ರಾಯಲ್ಸ್‌ ವಿರುದ್ಧ ಶುಭಾರಂಭ ಮಾಡಿ, ಲಖನೌ ವಿರುದ್ಧ ಮುಗ್ಗರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧ ಅನುಭವಿಸಿರುವ ಮುಖಭಂಗದಿಂದ ಗೊಂದಲಕ್ಕೆ ಒಳಗಾಗಿರುವ ಚೆನ್ನೈ ತಂಡ ಇಂದು ನಡೆಯುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಆಡಿದ ಎರಡೂ ಪಂದ್ಯ ಸೋತಿರುವ ರಾಯಲ್ಸ್ ಲೀಗ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಸನ್‌ರೈಸರ್ಸ್‌ ಹೈದರಾಬಾದ್‌- ಡೆಲ್ಲಿ ಕ್ಯಾಪಿಟಲ್ಸ್‌ (ಮಧ್ಯಾಹ್ನ 3.30
ರಾಜಸ್ಥಾನ ರಾಯಲ್ಸ್‌ - ಚೆನ್ನೈ ಸೂಪರ್‌ ಕಿಂಗ್ಸ್‌ (ರಾತ್ರಿ 7.30)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಜಿಯೊ ಹಾಟ್‌ಸ್ಟಾರ್‌

Share this Story:

Follow Webdunia kannada

ಮುಂದಿನ ಸುದ್ದಿ

ಟೈಟನ್ಸ್‌ ವಿರುದ್ಧ ಮುಂಬೈ ಸೋಲುತ್ತಿದ್ದಂತೆ ರೋಹಿತ್‌ಗೆ ಜವಾಬ್ದಾರಿಯ ಪಾಠ ಮಾಡಿದ ಪಾಂಡ್ಯ