ಹೈದರಾಬಾದ್: ಟೀಂ ಇಂಡಿಯಾದಿಂದ ಕಡೆಗಣಿಲ್ಪಟ್ಟ ಬೇಸರ ಮನದಲ್ಲಿತ್ತು. ಇದೇ ಆಕ್ರೋಶದಲ್ಲೇ ಮೊದಲ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ ಅಬ್ಬರದ ಶತಕ ಸಿಡಿಸಿದ್ದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಹೊಡೆಯುತ್ತೇನೆ ಎಂದು ಕೊಚ್ಚಿಕೊಂಡಿದ್ದರು. ಆದರೆ ಈಗ ಗಳಿಸಿದ್ದು ಗೋಲ್ಡನ್ ಡಕ್.
ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಶತಕ ಗಳಿಸಿದಾಗ ಎಷ್ಟೋ ಜನ ಇಂಥಾ ಆಟಗಾರನನ್ನು ತಂಡದಿಂದ ಹೊರಹಾಕಿದ್ದಾರಲ್ಲ ಎಂದು ಬೇಸರಪಟ್ಟುಕೊಂಡಿದ್ದರು. ತಮ್ಮನ್ನು ಟೀಂ ಇಂಡಿಯಾದಿಂದ ಹೊರಗಿಟ್ಟ ಆಕ್ರೋಶ ಇಶಾನ್ ಮುಖದಲ್ಲೂ ಎದ್ದು ಕಾಣುತ್ತಿತ್ತು.
ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಬಳಿಕ ಅವರ ಸಂಭ್ರಮವೂ ಆ ಮಟ್ಟಿಗಿತ್ತು. ಇದಾದ ಬಳಿಕ ಅದೇ ಜೋಶ್ ನಲ್ಲಿ ದ್ವಿಶತಕ ಸಿಡಿಸುತ್ತೇನೆ ಎಂದಿದ್ದರು. ಅವರ ಮಾತು ಕೇಳಿ ಈ ಆಟಗಾರನ ಛಲ ಎಂದು ಎಲ್ಲರೂ ಹೊಗಳಿದ್ದರು.
ಆದರೆ ಈಗ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಒಟ್ಟು 6 ಎಸೆತ ಎದುರಿಸಿದ ಅವರು ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದಾದ ಬಳಿಕ ನೆಟ್ಟಿಗರು ಅವರ ದ್ವಿಶತಕ ಹೇಳಿಕೆಯನ್ನು ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. ಹೇಳಿದಷ್ಟು ಸುಲಭವಲ್ಲ ಮಾಡುವುದು ಎಂದಿದ್ದಾರೆ.