Select Your Language

Notifications

webdunia
webdunia
webdunia
webdunia

IPL 2025: ನಾಳೆ ಅಭಿಮಾನಿಗಳ ನೆಚ್ಚಿನ ಆರ್‌ಸಿಬಿ vs ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ

IPL 2025

Sampriya

ಚೆನ್ನೈ , ಗುರುವಾರ, 27 ಮಾರ್ಚ್ 2025 (17:02 IST)
Photo Courtesy X
ಚೆನ್ನೈ: ಐಪಿಎಲ್‌ನ 10 ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು ಆರ್‌ಸಿಬಿ, ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್‌ಗೆ. ಅದರಲ್ಲೂ ಚೆನ್ನೈ ಹಾಗೂ ಆರ್‌ಸಿಬಿ ನಡುವಿನ ಪಂದ್ಯಾಟ ಇದರ ಅಭಿಮಾನಿಗಳಿಗೆ ಒಂದು ಹಬ್ಬವಾಗಿರುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನೂ ವೀಕ್ಷಿಸುವ ಸಂಖ್ಯೆಯೂ ಭಾರೀ ಇದೆ. ಈ ಪಂದ್ಯಾಟವನ್ನು ವೀಕ್ಷಿಸಲು ಸ್ಟೇಡಿಯಂಗೆ ಭಾರೀ ಜನ ಸೇರುತ್ತೆ.

ಇದೀಗ 2025ರ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಸಿಎಸ್‌ಕೆ ಹಾಗೂ ಆರ್‌ಸಿಬಿ ಎದುರಿಸಲಿದೆ. ನಾಳೆ ಅತೀ ಹೆಚ್ಚು ಅಭಿಮಾನಿಗಳು ಹೊಂದಿರುವ ಐಪಿಎಲ್ ತಂಡಗಳ ಮೊದಲ ಪಂದ್ಯಾಟ ನಾಳೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐಪಿಎಲ್ 2024 ರಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಆರ್‍‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡವನ್ನು ಆರ್‍‌ಸಿಬಿ ಪ್ಲೇಆಫ್ ರೇಸ್‌ನಿಂದ ಹೊರದಬ್ಬಿತ್ತು. ಈಗ ಆರ್‌ಸಿಬಿಗೆ ಮತ್ತೊಮ್ಮೆ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಹೆಡೆಮುರಿ ಕಟ್ಟುವ ಅವಕಾಶ ಸಿಕ್ಕಿದೆ.

ಚೆನ್ನೈ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ಭರವಸೆಯ ನೂರ್ ಅಹ್ಮದ್ ಅವರನ್ನು ಒಳಗೊಂಡ ಈಗಾಗಲೇ ಪ್ರಬಲ ಸ್ಪಿನ್ ದಾಳಿಯನ್ನು ರವಿಚಂದ್ರನ್ ಅಶ್ವಿನ್ ಅವರ ಮರಳುವಿಕೆ ಮತ್ತಷ್ಟು ಬಲಪಡಿಸುತ್ತದೆ. ಈ ಮೂವರು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದರು, 11 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರ ಬ್ಯಾಟಿಂಗ್ ತಂಡವನ್ನು ನಿಗ್ರಹಿಸಿದರು.

ಇನ್ನೂ ಆರ್‌ಸಿಬಿಯಲ್ಲಿ ರಜತ್ ಪಾಟಿದಾರ್ ಮತ್ತು ಸದಾ ವಿಶ್ವಾಸಾರ್ಹ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿಯ ಬ್ಯಾಟಿಂಗ್ ಘಟಕವು ಸಿಎಸ್‌ಕೆಯ ಸ್ಪಿನ್-ಹೆವಿ ವಿಧಾನವನ್ನು ಎದುರಿಸಲು ಹೆಜ್ಜೆ ಹಾಕಬೇಕಾಗುತ್ತದೆ. ಸ್ಪಿನ್ ವಿರುದ್ಧ ಕೊಹ್ಲಿಯ ಇತ್ತೀಚಿನ ಸುಧಾರಣೆಗಳು, ವಿಶೇಷವಾಗಿ ಸ್ವೀಪ್‌ಗಳು ಮತ್ತು ಸ್ಲಾಗ್ ಸ್ವೀಪ್‌ಗಳ ಹೆಚ್ಚಿದ ಬಳಕೆ ನಿರ್ಣಾಯಕವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಡ್ಯಾಡೀ ಡ್ಟೂಟಿ ಮುಗಿಯಿತು, ಡೆಲ್ಲಿ ಟೀಂಗೆ ಈ ಪಂದ್ಯಕ್ಕೆ ಕೆಎಲ್ ರಾಹುಲ್ ವಾಪಸ್