Select Your Language

Notifications

webdunia
webdunia
webdunia
webdunia

IPL 2025: ಮತ್ತೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ: ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲು

Royal Challengers Bangalore, Indian Premier League, Virat Kohli

Sampriya

ಬೆಂಗಳೂರು , ಬುಧವಾರ, 28 ಮೇ 2025 (14:24 IST)
Photo Courtesy X
ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್‌ ಮತ್ತೆ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ರನ್‌ಮಿಷಿನ್‌ ಖ್ಯಾತಿಯ ಕೊಹ್ಲಿ ಮಂಗಳವಾರ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆಯನ್ನು ನಿರ್ಮಿಸಿದ್ದಾರೆ.

ವಿರಾಟ್‌ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 9,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ.  ಆ ಮೂಲಕ ತಂಡವೊಂದರ ಪರ 9,000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಪೈಕಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೊಹ್ಲಿ 8,606 ರನ್‌ ಗಳಿಸಿದ್ದಾರೆ. ಹಾಗೆಯೇ ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ಪರ 424 ರನ್ ಪೇರಿಸಿದ್ದಾರೆ. ಈ ದಾಖಲೆಯ ಹಾದಿಯಲ್ಲಿ ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ ಪರ  6,060 ರನ್‌ ಗಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯ ಆವೃತ್ತಿಯೊಂದಲ್ಲಿ ಐದನೇ ಬಾರಿ 600 ರನ್‌ ದಾಟಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಕನ್ನಡಿಗ ಕೆ.ಎಲ್‌.ರಾಹುಲ್‌ (4 ಬಾರಿ) ಅವರನ್ನು ಹಿಂದಿಕ್ಕಿದ್ದಾರೆ.  ಐಪಿಎಲ್ ಋತುವಿನಲ್ಲಿ ಐದನೇ ಬಾರಿ ಕೊಹ್ಲಿ 600ಕ್ಕೂ ಹೆಚ್ಚು ರನ್ ದಾಖಲೆ ಬರೆದಿದ್ದಾರೆ. ಈ ಹಿಂದೆ 2013, 2016, 2013 ಹಾಗೂ 2024ರ ಆವೃತ್ತಿಗಳಲ್ಲೂ 600ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್ (63) ಎಂದೆನಿಸಿದ್ದಾರೆ.  ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ (62) ದಾಖಲೆಯನ್ನು ಮುರಿದಿದ್ದಾರೆ.

ಹಾಲಿ ಐಪಿಎಲ್‌ನಲ್ಲಿ ಕೊಹ್ಲಿ ಎಂಟು ಅರ್ಧ‌ಶತಕಗಳನ್ನು ಹೊಂದಿದ್ದಾರೆ. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್ ಎಂಬ ದಾಖಲೆಗೂ ಕೊಹ್ಲಿ ಭಾಜನರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಂಟನೇ ಸಲ ಅರ್ಧಶತಕದ ಸಾಧನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಐಪಿಎಲ್ ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ