ಕೋಲ್ಕೊತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಭೀತಿ ಕಾಡಿದೆ.
ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯ ಇಂದು ಸಂಜೆ 7.30 ಕ್ಕೆ ನಡೆಯಲಿದ್ದು, ಪಂದ್ಯಕ್ಕೆ ಮಳೆ ಭೀತಿಯಿದೆ. ಪ್ಲೇ ಆಫ್ ಪಂದ್ಯಗಳಿಗೆ ಮೊದಲು ಕೋಲ್ಕೊತ್ತಾದಲ್ಲಿ ಮಳೆಯಾಗಿತ್ತು.
ಹೀಗಾಗಿ ಈ ವಾರಂತ್ಯದವರೆಗೂ ಮಳೆಯಾಗುವ ಸಾಧ‍್ಯತೆಯಿದೆ. ಪಂದ್ಯದ ವೇಳೆ ಮಳೆಯಾಗದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.