Publish Date: Wed, 25 May 2022 (09:50 IST)
Updated Date: Wed, 25 May 2022 (09:58 IST)
ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದರ ಬಗ್ಗೆ ನೆಟ್ಟಿಗರೂ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ತಮ್ಮ ಮಗನಿಗೆ ಅವಕಾಶ ಸಿಗದ ಬಗ್ಗೆ ಸಚಿನ್ ತೆಂಡುಲ್ಕರ್ ಹೇಳಿದ್ದೇನು ಗೊತ್ತಾ? ಅರ್ಜುನ್ ಗೆ ಯಾವತ್ತೂ ನಿನ್ನ ದಾರಿ ಸವಾಲಿನಿಂದ ಕೂಡಿರುತ್ತದೆ. ಕ್ರಿಕೆಟ್ ಮೇಲಿನ ಪ್ರೀತಿ ಹೀಗೇ ಮುಂದುವರಿಸು. ಕಠಿಣ ಪರಿಶ್ರಮಪಡು, ಫಲಿತಾಂಶ ತಾನಾಗಿಯೇ ಬರುತ್ತದೆ ಎಂದಿದ್ದೆ ಎಂದಿದ್ದಾರೆ.
ಅಲ್ಲದೆ, ಯಾವುದೇ ತಂಡಕ್ಕೆ ಅರ್ಜುನ್ ಆಯ್ಕೆ ಮಾಡುವ ವಿಚಾರದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ಅದು ಆಯಾ ತಂಡದ ಮ್ಯಾನೇಜ್ ಮೆಂಟ್ ಗೆ ಬಿಟ್ಟ ವಿಚಾರ. ತಂಡದ ಆಯ್ಕೆ ವಿಚಾರದಲ್ಲಿ ತಾನು ಮಧ‍್ಯಪ್ರವೇಶಿಸುವುದಿಲ್ಲ ಎಂದು ಸಚಿನ್ ಸ್ಪಷ್ಟಪಡಿಸಿದ್ದಾರೆ.