Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಗುಜರಾತ್ ಗೆ ಸೋಲಿನ ಗುದ್ದು ಕೊಟ್ಟ ಮುಂಬೈ

ಐಪಿಎಲ್ 2022: ಗುಜರಾತ್ ಗೆ ಸೋಲಿನ ಗುದ್ದು ಕೊಟ್ಟ ಮುಂಬೈ
ಮುಂಬೈ , ಶನಿವಾರ, 7 ಮೇ 2022 (06:30 IST)
ಮುಂಬೈ: ಐಪಿಎಲ್ 2022 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಇದೀಗ ಸತತ ಎರಡನೇ ಗೆಲುವು ಕಂಡಿದೆ.

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ 5 ರನ್ ಗಳ ರೋಚಕ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಇಶಾನ್ ಕಿಶನ್ 45, ರೋಹಿತ್ ಶರ್ಮಾ 43, ಟಿಮ್ ಡೇವಿಡ್ 44 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ ಆರಂಭ ಉತ್ತಮವಾಗಿತ್ತು. ವೃದ್ಧಿಮಾನ್ ಸಹಾ 55, ಶುಬ್ನಂ ಗಿಲ್ 52 ರನ್ ಗಳಿಸಿದರು. ಆದರೆ ಅಂತಿಮ ಓವರ್ ಎಸೆದ ಡೇನಿಯಲ್ ಸ್ಯಾಮ್ಸ್ ಅದ್ಭುತ ಬೌಲಿಂಗ್ ನಡೆಸಿದರು. 6 ಎಸೆತದಲ್ಲಿ ಕೇವಲ 9 ರನ್ ಬೇಕಾಗಿದ್ದಾಗ ಒಂದು ವಿಕೆಟ್ ಕಿತ್ತಿದ್ದಲ್ಲದೆ ಕೇವಲ 4 ರನ್ ನೀಡಿ ತಂಡಕ್ಕೆ ರೋಚಕ ಗೆಲುವು ಕೊಡಿಸಿದರು. ಅಂತಿಮವಾಗಿ ಗುಜರಾತ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗೂಲಿ ಮನೆಯಲ್ಲಿ ಭರ್ಜರಿ ಭೋಜನ ಸವಿದ ಗೃಹಸಚಿವ ಅಮಿತ್ ಶಾ