Select Your Language

Notifications

webdunia
webdunia
webdunia
webdunia

ಗಂಗೂಲಿ ಮನೆಯಲ್ಲಿ ಭರ್ಜರಿ ಭೋಜನ ಸವಿದ ಗೃಹಸಚಿವ ಅಮಿತ್ ಶಾ

ಗಂಗೂಲಿ ಮನೆಯಲ್ಲಿ ಭರ್ಜರಿ ಭೋಜನ ಸವಿದ ಗೃಹಸಚಿವ ಅಮಿತ್ ಶಾ
ಕೋಲ್ಕೊತ್ತಾ , ಶುಕ್ರವಾರ, 6 ಮೇ 2022 (22:19 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ  ಇಂದು ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಮನೆಗೆ ಭೇಟಿ ನೀಡಿದ್ದಾರೆ.

ಸಂಜೆ ಗಂಗೂಲಿ ಆಹ್ವಾನಕ್ಕೆ ಮಣಿದು ಔತಣ ಕೂಟಕ್ಕೆ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಗಂಗೂಲಿ ಮನೆಗೆ ಅಮಿತ್ ಶಾ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿತ್ತು. ಆದರೆ ಇದು ಕೇವಲ ಸೌಹಾರ್ದಯುತ ಭೇಟಿಯಷ್ಟೇ, ಇದರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಗಂಗೂಲಿ ಖಡಕ್ಕಾಗಿ ಹೇಳಿದ್ದರು.

ಬಿಸಿಸಿಐನಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ಜೊತೆಗೆ ಗಂಗೂಲಿ ಬಿಸಿಸಿಐನಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಅದೇ ಸೌಹಾರ್ದದಿಂದ ಗಂಗೂಲಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಂಪೂರ್ಣ ಸಸ್ಯಾಹಾರಿ ಊಟ ಉಣಬಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು