Select Your Language

Notifications

webdunia
webdunia
webdunia
webdunia

ವಿರಾಟ್-ಅನುಷ್ಕಾಗೆ ಸದ್ಯದಲ್ಲೇ ಎರಡನೇ ಮಗು!

ವಿರಾಟ್-ಅನುಷ್ಕಾಗೆ ಸದ್ಯದಲ್ಲೇ ಎರಡನೇ ಮಗು!
ಮುಂಬೈ , ಸೋಮವಾರ, 2 ಮೇ 2022 (22:50 IST)
ಮುಂಬೈ: ವಮಿಕಾ ಎಂಬ ಮುದ್ದು ಮಗಳಿಗೆ ಪೋಷಕರಾಗಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಸದ್ಯದಲ್ಲೇ ಎರಡನೇ ಮಗುವಿಗೆ ತಾಯಿಯಾಗಲಿದ್ದಾರಂತೆ!

ಹಾಗಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಖ್ಯಾತ ಸಂಖ್ಯಾ ಶಾಸ್ತ್ರಜ್ಞರೊಬ್ಬರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಇನ್ನು ಎರಡು ವರ್ಷದೊಳಗಾಗಿ ಮತ್ತೊಂದು ಮಗುವಿಗೆ ತಾಯಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಸಂಖ್ಯಾಶಾಸ್ತ್ರಜ್ಞರು ಅನುಷ್ಕಾ ತಾಯಿಗೂ ಪರಿಚಿತರಂತೆ. ಕೆಲವು ಸಮಯದ ಹಿಂದೆ ಒಂದೊಳ್ಳೆ ಕೆಲಸಕ್ಕಾಗಿ ಅನುಷ್ಕಾ ಅವರ ತಾಯಿ ಇದೇ ಸಂಖ್ಯಾಶಾಸ್ತ್ರಜ್ಞರ ಸಲಹೆ ಕೇಳಿದ್ದರಂತೆ.  ಅವರೀಗ ವಿರಾಟ್ ದಂಪತಿ ಬಗ್ಗೆ ಕರಾರುವಾಕ್ ಆಗಿ ಇಂತಹದ್ದೊಂದು ಭವಿಷ್ಯ ನುಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಜೊತೆ ಶಿವರಾಜ್ ಕುಮಾರ್ ಡ್ಯಾನ್ಸ್