Publish Date: Fri, 29 Apr 2022 (19:05 IST)
Updated Date: Fri, 29 Apr 2022 (19:06 IST)
ಮುಂಬೈ: ಐಪಿಎಲ್ ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶ್ರೇಷ್ಠ ಆಟಗಾರರು. ಅವರು ಮತ್ತೆ ಫಾರ್ಮ್ ಗೆ ಮರಳಲಿದ್ದಾರೆ ಎಂಬುದು ಖಚಿತ. ವಿರಾಟ್ ಕೊಹ್ಲಿಯ ಮನಸ್ಸಲ್ಲಿ ಏನು ಓಡುತ್ತಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಸದ್ಯದಲ್ಲೇ ಅವರು ರನ್ ಗಳಿಸಲಿದ್ದಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ಐಪಿಎಲ್ ನಲ್ಲಿ ಈ ಬಾರಿ ಯಾವ ತಂಡ ಗೆಲ್ಲುತ್ತದೆ ಎಂದು ಈಗಲೇ ಹೇಳಲಾಗದು. ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ ಎಂದಿದ್ದಾರೆ.