Publish Date: Thu, 28 Apr 2022 (19:23 IST)
Updated Date: Thu, 28 Apr 2022 (19:24 IST)
ಮುಂಬೈ: ಕಳಪೆ ಫಾರ್ಮ್ ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಕಿಂಗ್ ಕೊಹ್ಲಿಗೆ ಗೆಳೆಯ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟಿಪ್ಸ್ ನೀಡಿದ್ದಾರೆ.
ಕೊಹ್ಲಿ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿರುವುದು ಸಹಜ. ಅವರೂ ತಮ್ಮ ಆಟದಿಂದ ನಿರಾಸೆಯಾಗಿರಬಹುದು ಇದು ಎಲ್ಲಾ ಶ್ರೇಷ್ಠ ಆಟಗಾರರಿಗೂ ಆಗುವುದೇ ಎಂದು ಯುವಿ ಹೇಳಿದ್ದಾರೆ.
ಇದಕ್ಕೆ ಇರುವ ಪರಿಹಾರವೆಂದರೆ ಕೊಹ್ಲಿ ಮೊದಲಿನಂತೆ ಆಕ್ರಮಣಕಾರಿಯಾಗಿ ಮನೋಭಾವವಿಟ್ಟುಕೊಂಡು ಒತ್ತಡವಿಲ್ಲದೇ ಆಡಬೇಕು ಎಂದು ಯುವಿ ಹೇಳಿದ್ದಾರೆ.