ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಗುಜರಾತ್ ಟೈಟನ್ಸ್ ಮತ್ತೆ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಅಭಿಷೇಕ್ ಶರ್ಮಾ 65, ಆಡಂ ಮಾರ್ಕರಮ್ 56, ಶಶಾಂಕ್ ಸಿಮಗ್ ಅಜೇಯ 25 ರನ್ ಸಿಡಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ ಕೊನೆಯ ಎಸೆತದಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ವೃದ್ಧಿಮಾನ್ ಸಹಾ 68, ಶುಬ್ನಂ ಗಿಲ್ 22, ರಾಹುಲ್ ತೆವಾತಿಯಾ 40 ರನ್ ಗಳಿಸಿದರು. ಕೊನೆಯಲ್ಲಿ 11 ಎಸೆತಗಳಲ್ಲಿ 31 ರನ್ ಸಿಡಿಸಿದ ರಶೀದ್ ಖಾನ್ ತಂಡದ ಗೆಲುವು ಖಚಿತಪಡಿಸಿದರು.