Select Your Language

Notifications

webdunia
webdunia
webdunia
webdunia

ವಿದ್ಯುತ್ ಸಮಸ್ಯೆ ಬಗ್ಗೆ ಸಾಕ್ಷಿ ಧೋನಿ ಟ್ವೀಟ್ ವೈರಲ್

ವಿದ್ಯುತ್ ಸಮಸ್ಯೆ ಬಗ್ಗೆ ಸಾಕ್ಷಿ ಧೋನಿ ಟ್ವೀಟ್ ವೈರಲ್
ರಾಂಚಿ , ಮಂಗಳವಾರ, 26 ಏಪ್ರಿಲ್ 2022 (19:15 IST)
ರಾಂಚಿ: ವಿದ್ಯುತ್ ಸಮಸ್ಯೆ ಬಗ್ಗೆ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಧೋನಿ ಮಾಡಿದ ಟ್ವೀಟ್ ಒಂದು ಭಾರೀ ವೈರಲ್ ಆಗಿದೆ.

ಜಾರ್ಖಂಡ್ ನಲ್ಲಿ ವಿದ್ಯುತ್ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಒಬ್ಬ ತೆರಿಗೆದಾರಳಾಗಿ ಈ ಸಮಸ್ಯೆ ಯಾಕೆ ಪರಿಹಾರವಾಗುತ್ತಿಲ್ಲ ಎಂದು ತಿಳಿಯಲು ಬಯಸುತ್ತೇನೆ. ವಿದ್ಯುತ್ ಉಳಿಸಲು ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಾಕ್ಷಿ ಧೋನಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.

ಈ ಟ್ವೀಟ್ ನೋಡಿ ಹಲವರು ಸಾಕ್ಷಿ ಧೋನಿಯನ್ನು ಬೆಂಬಲಿಸಿದ್ದರೆ ಮತ್ತೆ ಕೆಲವರು ಇಷ್ಟು ವರ್ಷವಾದ ಮೇಲೆ ಈಗ ನಿಮಗೆ ವಿದ್ಯುತ್ ಸಮಸ್ಯೆಯ ಗಂಭೀರತೆ ಅರಿವಾಯಿತೇ ಎಂದು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ನಿಂದ ಕೊನೆಗೂ ಮುಕ್ತಿ?