Select Your Language

Notifications

webdunia
webdunia
webdunia
Thursday, 10 April 2025
webdunia

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ನಿಂದ ಕೊನೆಗೂ ಮುಕ್ತಿ?

ಟೀಂ ಇಂಡಿಯಾ
ಮುಂಬೈ , ಮಂಗಳವಾರ, 26 ಏಪ್ರಿಲ್ 2022 (11:20 IST)
ಮುಂಬೈ: ಕೊರೋನಾ ಬಂದಾಗಿನಿಂದ ಕ್ರಿಕೆಟಿಗರು ಬಯೋ ಬಬಲ್ ನ ಕಠಿಣ ನಿಯಮದಿಂದ ಸಾಕಷ್ಟು ಬಳಲಿದ್ದಾರೆ. ಆದರೆ ಈಗ ಬಯೋ ಬಬಲ್ ವಾತಾವರಣಕ್ಕೆ ಮುಕ್ತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.

ಜೂನ್ 9 ರಿಂದ ತವರಿನಲ್ಲಿ ನಡೆಯಲಿರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬಯೋ ಬಬಲ್ ನಿಯಮವಿಲ್ಲದೇ ಸರಣಿ ಆಯೋಜಿಸುವ ಸಾಧ್ಯತೆಯಿದೆ.

ಇತ್ತೀಚೆಗಿನ ದಿನಗಳಲ್ಲಿ ಕ್ರಿಕೆಟಿಗರ ಪ್ರದರ್ಶನದ ಮೇಲೂ ಬಯೋ ಬಬಲ್ ವಾತಾವರಣ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೇಗಿದ್ದರೂ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಠಿಣ ನಿಯಮ ತೆಗೆದು ಹಾಕಲು ಬಿಸಿಸಿಐ ಚಿಂತನೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರ್ ಸಿಬಿಗೆ ರಾಜಸ್ಥಾನ್ ರಾಜರ ಸವಾಲು