Select Your Language

Notifications

webdunia
webdunia
webdunia
Monday, 7 April 2025
webdunia

ವಿಶ್ವಕಪ್ ತಂಡಕ್ಕೆ ಪುನರಾಗಮನ ಮಾಡಲು ದಿನೇಶ್ ಕಾರ್ತಿಕ್ ರೆಡಿ

ದಿನೇಶ್ ಕಾರ್ತಿಕ್
ಮುಂಬೈ , ಸೋಮವಾರ, 25 ಏಪ್ರಿಲ್ 2022 (11:43 IST)
ಮುಂಬೈ: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾ ಫಿನಿಶರ್ ರೋಲ್ ಅದ್ಭುತವಾಗಿ ನಿಭಾಯಿಸುತ್ತಿರುವ ದಿನೇಶ್ ಕಾರ್ತಿಕ್ ಗೆ ಈಗ ಟೀಂ ಇಂಡಿಯಾ ಬಾಗಿಲು ತೆರೆದಿದೆ.

ಮುಂಬರುವ ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲಾಗುವ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ರನ್ನು ಆಯ್ಕೆ ಮಾಡಲು ಬಿಸಿಸಿಐ ಒಲವು ತೋರಿದೆ ಎನ್ನಲಾಗಿದೆ.

ದಿನೇಶ್ ಕಾರ್ತಿಕ್ ಈ ಮೊದಲು ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ಕೆಲವೊಂದು ಇನಿಂಗ್ಸ್ ಗಳಲ್ಲಿ ಭಾರತಕ್ಕೆ ಗೆಲುವು ಕೊಡಿಸಿದ್ದರು. ಆದರೆ ಕಳಪೆ ಫಾರ್ಮ್ ನಿಂದ ಮತ್ತು ಯುವ ವಿಕೆಟ್ ಕೀಪರ್ ಗಳ ಆಗಮನದ ಬಳಿಕ ಕಾರ್ತಿಕ್ ಮೂಲೆಗುಂಪಾದರು. ಆದರೆ ಟೀಂ ಇಂಡಿಯಾಗೆ ಒಬ್ಬ ಉತ್ತಮ ಫಿನಿಶರ್ ನ ಅಗತ್ಯವಿದ್ದು, ಕಾರ್ತಿಕ್ ಅದನ್ನು ಮಾಡಬಲ್ಲರು ಎಂಬ ವಿಶ್ವಾಸ ಬಿಸಿಸಿಐಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕಿಂಗ್ಸ್ ಪಂಜಾಬ್ ಗೆ ಚೆನ್ನೈ ಎದುರಾಳಿ