ಮುಂಬೈ: ಐಪಿಎಲ್ 2022 ರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ವರ್ತನೆಗೆ ಮಾಜಿಗಳಿಂದ ತೀವ್ರ ಟೀಕೆ ಎದುರಾಗಿದೆ.
ಕೊನೆಯ ಓವರ್ ನಲ್ಲಿ ನೋ ಬಾಲ್ ನೀಡದೇ ಅಂಪಾಯರ್ ಪ್ರಮಾದ ಎಸಗಿದ್ದಕ್ಕೆ ರಿಷಬ್ ತಮ್ಮ ತಂಡದ ಆಟಗಾರರನ್ನು ಮೈದಾನದಿಂದ ಕರೆಸಿಕೊಳ್ಳಲು ಸಂಜ್ಞೆ ಮಾಡಿದ್ದರು.
ಅವರ ಈ ವರ್ತನೆಗೆ ಹಲವರು ಟೀಕಿಸಿದ್ದಾರೆ. ಇದು ಕ್ರೀಡಾ ಸ್ಪೂರ್ತಿ ತೋರಿಸುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ರಿಷಬ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಫುಟ್ಬಾಲ್ ಅಲ್ಲ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.