Select Your Language

Notifications

webdunia
webdunia
webdunia
webdunia

ಸೋಲಿನ ಬೆನ್ನಲ್ಲೇ ಟ್ರೋಲ್ ಆದ ರೋಹಿತ್ ಶರ್ಮಾ

ಸೋಲಿನ ಬೆನ್ನಲ್ಲೇ ಟ್ರೋಲ್ ಆದ ರೋಹಿತ್ ಶರ್ಮಾ
ಮುಂಬೈ , ಶುಕ್ರವಾರ, 22 ಏಪ್ರಿಲ್ 2022 (10:00 IST)
ಮುಂಬೈ: ಐಪಿಎಲ್ 2022 ರಲ್ಲಿ ಇದುವರೆಗೆ ತಮ್ಮ ತಂಡಕ್ಕೆ ಒಂದೇ ಒಂದು ಗೆಲುವು ಕೊಡಿಸಲು ವಿಫಲರಾಗಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನೆಟ್ಟಿಗರಿಂದ ತೀವ್ರ ಟೀಕೆಗೊಳಗಾಗಿದ್ದಾರೆ.

ಸಿಎಸ್ ಕೆ ವಿರುದ್ಧದ ನಿನ್ನೆಯ ಪಂದ್ಯವನ್ನೂ ಸೋಲುವುದರೊಂದಿಗೆ ಮುಂಬೈ ಸತತ 7 ನೇ ಸೋಲುಂಡಂತಾಗಿದೆ. ಇದರೊಂದಿಗೆ ನೆಟ್ಟಿಗರು ರೋಹಿತ್ ಕಳಪೆ ಫಾರ್ಮ್ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ.

ಮೊಟ್ಟೆಯೊಳಗಿನಿಂದ ಹೊರಬಂದಂತೆ ಫೋಟೋ ಎಡಿಟ್ ಮಾಡಿ ರೋಹಿತ್ ರನ್ನು ಲೇವಡಿ ಮಾಡಿದ್ದಾರೆ. ಮತ್ತೆ ಕೆಲವರು ಹಿಂದೆ ವಿರಾಟ್ ಕೊಹ್ಲಿಯೂ ಸೋಲು ಕಾಣುತ್ತಿದ್ದಾಗ ಎಲ್ಲರೂ ಅವರ ನಾಯಕತ್ವವನ್ನು ಟೀಕಿಸಿದ್ದರು. ಇದೀಗ ರೋಹಿತ್ ಗೂ ಅದೇ ಗತಿಯಾದಾಗ ಕೆಲವರಿಗೆ ಸೋತವರ ಮನಸ್ಥಿತಿ ಹೇಗಿರುತ್ತದೆ ಎಂದು ಅರಿವಾಗಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೆ ತಲೆಬಾಗಿ ನಮಸ್ಕರಿಸಿದ ರವೀಂದ್ರ ಜಡೇಜಾ