Select Your Language

Notifications

webdunia
webdunia
webdunia
webdunia

ಮುಂಬೈ ಸತತ ಆರನೇ ಸೋಲುಂಡ ಬಳಿಕ ಎಲ್ಲಾ ಹೊಣೆ ನನ್ನದು ಎಂದ ರೋಹಿತ್ ಶರ್ಮಾ

ಮುಂಬೈ ಸತತ ಆರನೇ ಸೋಲುಂಡ ಬಳಿಕ ಎಲ್ಲಾ ಹೊಣೆ ನನ್ನದು ಎಂದ ರೋಹಿತ್ ಶರ್ಮಾ
ಮುಂಬೈ , ಭಾನುವಾರ, 17 ಏಪ್ರಿಲ್ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ದುರಾದೃಷ್ಟ ಮುಂದುವರಿದಿದೆ. ನಿನ್ನೆಯ ಪಂದ್ಯವನ್ನು ಲಕ್ನೋ ವಿರುದ್ಧ 18 ರನ್ ಗಳಿಂದ ಸೋತ ಬಳಿಕ ನಾಯಕ ರೋಹಿತ್ ಶರ್ಮಾ ಎಲ್ಲಾ ಹೊಣೆ ನನ್ನದು ಎಂದಿದ್ದಾರೆ.

ನಿನ್ನೆಯ ಪಂದ್ಯದಲ್ಲೂ ರೋಹಿತ್ ಮತ್ತೆ 6 ರನ್ ಗಳಿಗೆ ಔಟಾಗಿ ಕಳಪೆ ಫಾರ್ಮ್ ಮುಂದುವರಿಸಿದ್ದರು. ಇದರೊಂದಿಗೆ ಮುಂಬೈ ದಾಖಲೆಯ ಸತತ 6 ಪಂದ್ಯ ಸೋತಂತಾಗಿದೆ.

‘ನಾನೇನು ತಪ್ಪು ಮಾಡುತ್ತಿದ್ದೇನೆ ಎಂದು ಗೊತ್ತಾದರೆ ತಿದ್ದಿಕೊಳ್ಳಬಹುದು. ಆದರೆ ಪ್ರತೀ ಪಂದ್ಯಕ್ಕೆ ತಯಾರಾಗುವಂತೆ ಈಗಲೂ ತಯಾರಾಗುತ್ತೇನೆ. ಹಾಗಿದ್ದರೂ ಯಾವುದೂ ನಮ್ಮ ಪರವಾಗಿ ಬರುತ್ತಿಲ್ಲ. ತಂಡ ನನ್ನಿಂದ ಏನು ನಿರೀಕ್ಷಿಸುತ್ತದೋ ಆ ಸ್ಥಾನಕ್ಕೆ ಕೊಂಡೊಯ್ಯಲಾಗದಿದ್ದಕ್ಕೆ ನಾನೇ ಈ ಎಲ್ಲಾ ಸೋಲಿನ ಹೊಣೆ ಹೊರುತ್ತೇನೆ. ಮುಂದಿನ ಪಂದ್ಯಗಳತ್ತ ಗಮನಹರಿಸುತ್ತೇವೆ’ ಎಂದು ರೋಹಿತ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ದಿನೇಶ್ ಕಾರ್ತಿಕ್ ಅಬ್ಬರ, ಗೆದ್ದ ಆರ್ ಸಿಬಿ