Publish Date: Sat, 16 Apr 2022 (10:34 IST)
Updated Date: Sat, 16 Apr 2022 (06:36 IST)
ಮುಂಬೈ: ಐಪಿಎಲ್ 2022 ರಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚುತ್ತಿರುವ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಗೆ ಈಗ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಅವಕಾಶ ಸಿಕ್ಕಿದೆ.
ಕಳೆದ ಕೆಲವು ಸರಣಿಗಳಿಂದ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆಯಿಂದಾಗಿ ಆಯ್ಕೆಯಾಗುತ್ತಲೇ ಇರಲಿಲ್ಲ. ಈ ನಡುವೆ ಬಿಸಿಸಿಐ ಆಯ್ಕೆ ಸಮಿತಿ ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್, ಫಾರ್ಮ್ ಸಾಬೀತು ಪಡಿಸಿದರೆ ಮಾತ್ರ ಪಾಂಡ್ಯಗೆ ಟೀಂ ಇಂಡಿಯಾದಲ್ಲಿ ಸ್ಥಾನ ಎಂದಿತ್ತು.
ಅದರಂತೆ ಈಗ ಪಾಂಡ್ಯ ಎರಡೂ ವಿಭಾಗದಲ್ಲಿ ಮಿಂಚುತ್ತಿದ್ದು, ಮುಂಬರುವ ಸರಣಿಗಳಿಗೆ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಎಲ್ಲಾ ಸಾಧ್ಯತೆಯಿದೆ.