Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಡೆಲ್ಲಿಗೆ ಸೋಲುಣಿಸಿದ ರಾಜಸ್ಥಾನ್ ರಾಜರು

ಐಪಿಎಲ್ 2022: ಡೆಲ್ಲಿಗೆ ಸೋಲುಣಿಸಿದ ರಾಜಸ್ಥಾನ್ ರಾಜರು
ಮುಂಬೈ , ಶನಿವಾರ, 23 ಏಪ್ರಿಲ್ 2022 (06:40 IST)
ಮುಂಬೈ: ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 15 ರನ್ ಗಳಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಗಳ ಭರ್ಜರಿ ಮೊತ್ತ ದಾಖಲಿಸಿತು. ಜೋಸ್ ಬಟ್ಲರ್ ಮತ್ತೆ ಶತಕ (116) ಸಿಡಿಸಿದರೆ ದೇವದತ್ತ್ ಪಡಿಕ್ಕಲ್ 54 ರನ್ ಗಳಿಸಿದರು. ನಾಯಕ ಸಂಜು ಸ್ಯಾಮ್ಸನ್ 46 ರನ್ ಗಳ ಕೊಡುಗೆ ನೀಡಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಪೃಥ್ವಿ ಶಾ 37, ಡೇವಿಡ್ ವಾರ್ನರ್ 28, ರಿಷಬ್ ಪಂತ್ 44, ಲಲಿತ್ ಯಾದವ್ 37 ರನ್ ಗಳಿಸಿದರು. ಕೊನೆಯಲ್ಲಿ ರೋವ್ಮಾನ್ ಪೊವೆಲ್ 36 ರನ್ ಸಿಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಬೆನ್ನಲ್ಲೇ ಟ್ರೋಲ್ ಆದ ರೋಹಿತ್ ಶರ್ಮಾ