ಮುಂಬೈ: ಐಪಿಎಲ್ 2022 ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನೂ 3 ವಿಕೆಟ್ ಗಳಿಂದ ಸೋತ ಮುಂಬೈ ಸತತ 7 ನೇ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ ಇಶಾನ್ ಕಿಶನ್ ಗೋಲ್ಡನ್ ಡಕ್ ಆದರು. ಕೊನೆಗೆ ಸೂರ್ಯಕುಮಾರ್ ಯಾದವ್ 32, ತಿಲಕ್ ವರ್ಮ ಅಜೇಯ 51 ರನ್ ಗಳಸಿ ತಂಡವನ್ನು ಕಾಪಾಡಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ರೋಚಕ ಗೆಲುವು ಕಂಡಿತು. ರಾಬಿನ್ ಉತ್ತಪ್ಪ 30, ಅಂಬಟಿ ರಾಯುಡು 40, ಧೋನಿ 28 ರನ್ ಗಳಿಸಿದರು.