Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ: ರವಿಶಾಸ್ತ್ರಿ

ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ: ರವಿಶಾಸ್ತ್ರಿ
ಮುಂಬೈ , ಬುಧವಾರ, 20 ಏಪ್ರಿಲ್ 2022 (10:25 IST)
ಮುಂಬೈ: ಐಪಿಎಲ್ 2022 ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಟೀಕೆಗೊಳಗಾಗಿರುವ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪರವಾಗಿ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಬಳಲಿದ್ದಾರೆ. ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ಕೊಂಚ ವಿಶ್ರಾಂತಿ ನೀಡಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ನಿಯಮಗಳಿಂದಾಗಿ ಆಟಗಾರರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಕೊಹ್ಲಿ ಇನ್ನೂ 6-7 ವರ್ಷ ಕ್ರಿಕೆಟ್ ಆಡಬಲ್ಲರು. ಹೀಗಾಗಿ ಬಯೋಬಬಲ್ ನಿಯಂತ್ರಣದಿಂದ ಅವರು ಕುಗ್ಗಿಹೋಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಅಗರ್ವಾಲ್ ಚೇತರಿಕೆ: ಇಂದಿನ ಪಂದ್ಯಕ್ಕೆ ಮರಳುವ ಸಾಧ್ಯತೆ