Select Your Language

Notifications

webdunia
webdunia
webdunia
webdunia

ಲಕ್ನೊ-ಆರ್ ಸಿಬಿ ಪಂದ್ಯ ಇಂದು: ಸಮಬಲರ ನಡುವೆ ಪೈಪೋಟಿ!

ಲಕ್ನೊ-ಆರ್ ಸಿಬಿ ಪಂದ್ಯ ಇಂದು: ಸಮಬಲರ ನಡುವೆ ಪೈಪೋಟಿ!
bengaluru , ಮಂಗಳವಾರ, 19 ಏಪ್ರಿಲ್ 2022 (17:09 IST)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಗೈಂಟ್ಸ್ ತಂಡಗಳು ಮಂಗಳವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಗೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಜಯ ಸಾಧಿಸಿದ್ದು, ಎರಡೂ ತಂಡಗಳು ತಲಾ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದು, ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಈ ತಂಡಗಳು ತಮ್ಮ ಅಭಿಯಾನ ಮುಂದುವರಿಸುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿವೆ.

ಲಕ್ನೋ ಸೂಪರ್ ಗೈಂಟ್ಸ್ ತಂಡದಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿ ಗಮನ ಸೆಳೆದಿದ್ದು, ಅವರ ಭರ್ಜರಿ ಫಾರ್ಮ್ ಬಲವಾಗಿದ್ದರೆ, ಆರ್ ಸಿಬಿ ತಂಡದ ಗೆಲುವಿನಲ್ಲಿ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳದೇ ಇರುವುದು ತಂಡವನ್ನು ಚಿಂತೆಗೀಡು ಮಾಡಿದೆ. ಆದರೆ ಮ್ಯಾಕ್ಸ್ ವೆಲ್, ಕಾರ್ತಿಕ್ ತಂಡವನ್ನು ಆಧರಿಸುತ್ತಿದ್ದರೆ, ಫಾಫ್ ಡು ಪ್ಲೆಸಿಸ್ ಕೂಡ ತಕ್ಕಮಟ್ಟಿಗೆ ಪ್ರದರ್ಶನ ನೀಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬ ದಿನ ಗೆಳತಿ ಅಥಿಯಾ ಜೊತೆ ಕೆಎಲ್ ರಾಹುಲ್ ರೊಮ್ಯಾಂಟಿಕ್ ಫೋಟೋ