Publish Date: Wed, 20 Apr 2022 (09:40 IST)
Updated Date: Wed, 20 Apr 2022 (09:44 IST)
ಮುಂಬೈ: ಗಾಯಗೊಂಡಿರುವ ಕಿಂಗ್ಸ್ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಚೇತರಿಕೆಯ ಹಾದಿಯಲ್ಲಿದ್ದು, ಇಂದಿನ ಪಂದ್ಯಕ್ಕೆ ಮರಳುವ ಸಾಧ್ಯತೆಯಿದೆ.
ಮಯಾಂಕ್ ಹೆಬ್ಬರಳಿನ ಗಾಯದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಇದರಿಂದಾಗಿ ಶಿಖರ್ ಧವನ್ ತಂಡವನ್ನು ಮುನ್ನಡೆಸಿದ್ದರು.
ಆದರೆ ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಇಂದಿನ ಪಂದ್ಯಕ್ಕೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಮಯಾಂಕ್ ಚೇತರಿಸಿಕೊಳ್ಳುತ್ತಿರುವುದಾಗಿ ಧವನ್ ಹೇಳಿದ್ದರು.