ಮುಂಬೈ: ಹಿಂದಿನ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ ಘಟನೆ ಬಗ್ಗೆ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಅಂದು ಕೊಹ್ಲಿ ಸ್ಲೆಡ್ಜಿಂಗ್ ಮಾಡಲು ಬಂದಾಗ ಸೂರ್ಯಕುಮಾರ್ ಯಾದವ್ ಮುಖ ತಿರುಗಿಸಿ ನಡೆದರು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇದೀಗ ಆ ಘಟನೆ ಬಗ್ಗೆ ನೆನೆಸಿಕೊಂಡಿರುವ ಸೂರ್ಯ ಆಗ ತನಗೆ ಯಾವ ರೀತಿ ಅನುಭವವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನಾನು ಆವತ್ತು ಹೇಗಾದರೂ ತಂಡಕ್ಕೆ ಗೆಲುವು ಕೊಡಿಸುವ ಪ್ರಯತ್ನದಲ್ಲಿದ್ದೆ. ಆವತ್ತು ಕೊಹ್ಲಿ ನನ್ನ ಬಳಿಗೆ ಬಂದಾಗ ನಿಜವಾಗಿಯೂ ಭಯವಾಗಿತ್ತು. ನನ್ನ ಬಾಯಲ್ಲಿ ಚ್ಯುಯಿಂಗ್ ಜಗಿಯುತ್ತಿದ್ದರೂ ಹೃದಯ ಬಡಿತ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಏನೇ ಆದರೂ ಪ್ರತಿಕ್ರಿಯಿಸಬೇಡ ಎಂದು ಮನಸ್ಸು ಹೇಳುತ್ತಿತ್ತು. 10 ಸೆಕೆಂಡುಗಳ ವಿಚಾರ, ಓವರ್ ಮುಗಿದುಹೋಗುತ್ತದೆ ಎಂದು ಸಮಾಧಾನ ಮಾಡಿಕೊಂಡೆ ಎಂದು ಸೂರ್ಯಕುಮಾರ್ ನೆನೆಸಿಕೊಂಡಿದ್ದಾರೆ.