Publish Date: Mon, 18 Apr 2022 (07:34 IST)
Updated Date: Mon, 18 Apr 2022 (07:34 IST)
ಮುಂಬೈ: ಐಪಿಎಲ್ 2022 ರ ನಿನ್ನೆಯ ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೈದಾನಕ್ಕಿಳಿಯಲಿಲ್ಲ.
ನಿನ್ನೆಯ ಪಂದ್ಯದಿಂದ ಹಾರ್ದಿಕ್ ಹೊರಗುಳಿಯಲು ಕಾರಣ ಅವರ ಫಿಟ್ನೆಸ್. ಪದೇ ಪದೇ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಮೂಲೆಗುಂಪಾಗಿದ್ದ ಹಾರ್ದಿಕ್ ಐಪಿಎಲ್ ವೇಳೆಗೆ ಚೇತರಿಸಿಕೊಂಡು ಇಷ್ಟು ದಿನದ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು.
ಆದರೆ ಇದೀಗ ಮತ್ತೆ ಗಾಯದ ಸಮಸ್ಯೆಗೊಳಗಾಗಿದ್ದಾರೆ. ತೊಡೆಸಂಧು ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನಿನ್ನೆಯ ಪಂದ್ಯಕ್ಕೆ ಗೈರಾಗಿದ್ದರು. ಹಾರ್ದಿಕ್ ಬದಲಿಗೆ ರಶೀದ್ ಖಾನ್ ತಂಡವನ್ನು ಮುನ್ನಡೆಸಿದ್ದರು.