Publish Date: Sun, 17 Apr 2022 (10:10 IST)
Updated Date: Sun, 17 Apr 2022 (10:10 IST)
ಮುಂಬೈ: ಬಹುಶಃ ನಾನು ಬೌಲಿಂಗ್ ಮಾಡುತ್ತಿದ್ದರೆ ವಿರಾಟ್ ಕೊಹ್ಲಿ ಇಷ್ಟೊಂದು ರನ್ ಗಳಿಸಲು ಸಾಧ‍್ಯವಾಗುತ್ತಿರಲಿಲ್ಲ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಸ್ವಯಂ ಹೊಗಳಿಕೊಂಡಿದ್ದಾರೆ.
ಈ ಮೊದಲು ಸಂದರ್ಶನವೊಂದರಲ್ಲಿ ಕೊಹ್ಲಿ, ಶೊಯೇಬ್ ಬೌಲಿಂಗ್ ನ್ನು ಹೊಗಳಿದ್ದರು. ಅದಕ್ಕೆ ಈಗ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಅಖ್ತರ್, ವಿರಾಟ್ ಅದ್ಭುತ ಆಟಗಾರ. ಅವರಂತಹ ಆಟಗಾರರಿಂದ ಇಂತಹ ದೊಡ್ಡ ಮಾತುಗಳು ಬರುವುದು ಸಹಜ ಎಂದಿದ್ದಾರೆ.
ಆದರೆ ನಾನು ಅವರ ಕಾಲದಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಅವರಿಗೆ ಇಷ್ಟು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ನಾನು ಬೌಲಿಂಗ್ ಮಾಡುತ್ತಿದ್ದರೆ ಅವರಿಂದ ಅತ್ಯುತ್ತಮ ಆಟವನ್ನು ಹೊರತೆಗೆಯುತ್ತಿದ್ದೆ. ಆಗ ಬಹುಶಃ ಅವರಿಗೆ 50 ಶತಕ ದಾಖಲಿಸಲು ಸಾಧ‍್ಯವಾಗುತ್ತಿರಲಿಲ್ಲ. ಬಹುಶಃ ಅವರ ಬಳಿ 20-25 ಶತಕಗಳಿರುತ್ತಿತ್ತು. ಆದರೆ ಅದೂ ಅತ್ಯುತ್ತಮ ಇನಿಂಗ್ಸ್ ಗಳಾಗಿರುತ್ತಿತ್ತು ಎಂದು ಶೊಯೇಬ್ ಹೇಳಿದ್ದಾರೆ.