ಮುಂಬೈ: ಐಪಿಎಲ್ ನಲ್ಲಿ ಮುಂಬೈ ಆಟಗಾರರಾಗಿರುವ ಅರ್ಜುನ್ ತೆಂಡುಲ್ಕರ್ ಗೆ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಈಗ ಒಂದೇ ಒಂದು ಯಾರ್ಕರ್ ನಿಂದ ಸುದ್ದಿಯಾಗಿದ್ದಾರೆ.
									
			
			 
 			
 
 			
			                     
							
							
			        							
								
																	ಮುಂಬೈ ಆಟಗಾರರ ನೆಟ್ ಪ್ರಾಕ್ಟೀಸ್ ವೇಳೆ ಅರ್ಜುನ್ ತೆಂಡುಲ್ಕರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಅವರು ಎಸೆದ ಕರಾರುವಾಕ್ ಯಾರ್ಕ್ ಎಸೆತವೊಂದು ಬ್ಯಾಟಿಗನನ್ನು ಬೌಲ್ಡ್ ಮಾಡಿದೆ.
									
										
								
																	ಈ ಯಾರ್ಕರ್ ವಿಡಿಯೋ ವೀಕ್ಷಿಸಿದ ಮಂದಿ ಸದ್ಯದಲ್ಲೇ ಅರ್ಜುನ್ ಐಪಿಎಲ್ ಗೆ ಪದಾರ್ಪಣೆ ಮಾಡುವುದು ಖಚಿತ ಎಂದಿದ್ದಾರೆ. 20 ಲಕ್ಷ ರೂ. ಮೂಲ ಬೆಲೆಗೆ ಮುಂಬೈ ಅರ್ಜುನ್ ತೆಂಡುಲ್ಕರ್ ರನ್ನು ತಂಡಕ್ಕೆ ಖರೀದಿ ಮಾಡಿತ್ತು.